ಖಾಸಗಿ ವಿಡಿಯೋ ಲೀಕ್ ಮಾಡ್ತೀವಿ: ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ

0
9

ಕನ್ನಡ ಚಿತ್ರರಂಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಕಾಲಿಡುತ್ತಾರೆ ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಮಾತನಾಡಲಿದ್ದಾರೆಂತೆ. ಅಷ್ಟರಲ್ಲಿ ಬೆದರಿಕೆ ಪತ್ರವೊಂದು ಕಿಚ್ಚನ ಮ್ಯಾನೇಜರ್ ಜಾಕ್ ಮಂಜು ಕೈ ಸೇರಿದೆ. ತಕ್ಷಣವೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಬೆದರಿಕೆ ಹಾಕಲಾಗಿದೆ. ಇದರಿಂದ ಸುದೀಪ್​ಗೆ ಮಾನಸಿಕ ಕಿರುಕುಳ  ಉಂಟಾಗಿದ್ದು, ನಟನ ಘನತೆಗೆ ಧಕ್ಕೆ ತರಲು ಮಾಡಿರುವ ಸಂಚು ಎಂದು ಮಂಜುನಾಥ್ ಅವರು ದೂರಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪತ್ರ ಕಳುಹಿಸಿದ್ದು ಯಾರು ಎನ್ನುವ ಹುಡುಕಾಟ ನಡೆಯುತ್ತಿದೆ.

Previous articleಬೆಳಗಾವಿ: ಟೋಲ್ ಗೇಟ್ ನಲ್ಲಿ ದಾಖಲೆ ರಹಿತ ಎರಡು ಕೋಟಿ ನಗದು ವಶ
Next articleಮೂಡುಬಿದಿರೆಯ ಕೃಷಿ ತಜ್ಞ ಡಾ.ಎಲ್.ಸಿ ಸೋನ್ಸ್ ವಿಧಿವಶ