ಸಿದ್ದರಾಮಯ್ಯ ಪ್ರತ್ಯೇಕ ಧರ್ಮ ಮಾಡಲು ಹೊರಟಿರಲಿಲ್ಲ: ಸಚಿವ ಖಂಡ್ರೆ

0
39

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಪ್ರತ್ಯೇಕ ಧರ್ಮ ಮಾಡಲು ಹೊರಟಿರಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂದು ಕೆಲವರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದರು. ಅದು ಚರ್ಚೆಗೆ ಮಾತ್ರ ಸೀಮಿತವಾಗಿತ್ತು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಿರಿಯ ಉಪಾಧ್ಯಕ್ಷರು ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವ ಈಶ್ವರ ಖಂಡ್ರೆ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ-ಲಿಂಗಾಯತರ ಬೇರೆಯಲ್ಲ. ಅವರಿಬ್ಬರೂ ಒಂದೇ. ಗುರು-ವಿರಕ್ತರೆಂಬ ಭೇದವಿಲ್ಲದೇ ಒಂದಾಗಿದ್ದೇವೆ. ಅದಕ್ಕಾಗಿಯೇ ಹುಬ್ಬಳ್ಳಿಯಲ್ಲಿ ಸೆ. 19 ರಂದು ಮಧ್ಯಾಹ್ನ 3ಕ್ಕೆ ವೀರಶೈವ-ಲಿಂಗಾಯತರ ಏಕತಾ ಸಮಾವೇಶ ಜರುಗಲಿದೆ ಎಂದು ಸಚಿವರು ತಿಳಿಸಿದರು.

ವೀರಶೈವ-ಲಿಂಗಾಯತ ಸಮನಾರ್ಥಕ ಪದಗಳು. ವಿವಿಧ ಮಠಾಧೀಶರು, ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ವಿವಿಧ ಮಠಾಧೀಶರು, ಅನ್ನ, ಆಶ್ರಯ, ಶಿಕ್ಷಣ ಮತ್ತು ಸಂಸ್ಕಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಬಸವ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂದರು.
ಭಾರತದಲ್ಲಿ 1931 ರಿಂದ ನಡೆದ ಜಾತಿ ಗಣತಿಯಲ್ಲಿ ವೀರಶೈವ-ಲಿಂಗಾಯತರೆಂಬ ಧರ್ಮವನ್ನು ನಮೂದಿಸಲಾಗಿದೆ. ಇದರ ಬಗ್ಗೆ ಯಾರೂ ಗೊಂದಲ ಸೃಷ್ಟಿಸುವುದು ಬೇಡ ಎಂದು ಧರ್ಮದ ಕಾಲಂನಲ್ಲಿ ಲಿಂಗಾಯತ ಸೇರಿಸಬೇಕೆಂಬುವವರಿಗೆ ಸಚಿವರು ಚಾಟಿ ಬೀಸಿದರು.

ವೀರಶೈವ ಲಿಂಗಾಯತ ಒಂದು, ವಿಶ್ವವೇ ನಮ್ಮ ಬಂಧು: ವೀರಶೈವ-ಲಿಂಗಾಯತರು ಬೇರೆ ಬೇರೆಯಲ್ಲ. ಜಗದ್ಗುರುಗಳು ಕೂಡ ಬಸವಣ್ಣನವರ ಫೋಟೋವನ್ನು ದಸರಾ ದರ್ಬಾರದಲ್ಲಿ ಹಾಕಿಸಿದ್ದರು. ಪಂಚಪೀಠದವರು ಬದಲಾದರೆ ನಾವು ಬದಲಾಗುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ವೀರಶೈವ-ಲಿಂಗಾಯತ ಒಂದು, ವಿಶ್ವವೇ ನಮ್ಮ ಬಂಧು ಎಂಬ ಧ್ಯೇಯವಾಕ್ಯವನ್ನು ನಾವು ಅಳವಡಿಸಿಕೊಂಡಿದ್ದೇವೆ. ಎಲ್ಲರೂ ಕೂಡಬೇಕು ಎಂಬುದು ನಮ್ಮ ಉದ್ದೇಶ. ವಿರಕ್ತಮಠಗಳು, ಪಂಚಪೀಠ ಹಾಗೂ ಎಲ್ಲ ಸ್ವಾಮೀಜಿಯವರನ್ನು ಕಾಲವೇ ಕೂಡಿಸುವುದು ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Previous articleಮೊಹಮ್ಮದ್ ಸಿರಾಜ್‌ಗೆ ಐಸಿಸಿ ಆಗಸ್ಟ್ ತಿಂಗಳ ಆಟಗಾರ ಪ್ರಶಸ್ತಿ!
Next articleಹುಬ್ಬಳ್ಳಿ: ವಿಮಾನದ ತುರ್ತು ಬಾಗಿಲು ತೆಗೆದ ಪ್ರಯಾಣಿಕ – ದೂರು ದಾಖಲು

LEAVE A REPLY

Please enter your comment!
Please enter your name here