ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧ

0
46


ದಾಂಡೇಲಿ: ರಾಮನಗರ- ಗೋವಾ ರಾಷ್ಟ್ರೀಯ ಹೆದ್ದಾರಿ NH-4 A(ಗೋವಾಕ್ಕೆ ಸೇರಿದ ಪ್ರದೇಶ) ರಸ್ತೆ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ಸದ್ರಿ ರಸ್ತೆಯ ಮೇಲಿನ ಸಂಚಾರ ನಿಷೇಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಆದೇಶ ಹೊರಡಿಸಿದ್ದಾರೆ. ಜುಲೈ 5ರಂದು ರಸ್ತೆ ಕುಸಿತವಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಕಲೆಕ್ಟರ್ ಗೋವಾ ದಕ್ಷಿಣರವರು ಈ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಆದೇಶದಲ್ಲಿ ದಿನನಿತ್ಯ ಅಗತ್ಯ ಸೇವೆಗಳಡಿ ಬರುವ ತರಕಾರಿ ಲಘು ವಾಹನ, ಹಾಲಿನ ವಾಹನ, ಇನ್ನತರೆ ಲಘು ವಾಹನಗಳ ಸಾರ್ವಜನಿಕ ಸಂಚಾರ ಹೊರತು ಪಡಿಸಿ ಅಧಿಕ ಭಾರದ ವಾಹನ, ಟ್ರಕ್ ಗಳ ಸಂಚಾರವನ್ನು ಜುಲೈ 5ರಿಂದ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.

Previous articleಚಿಕ್ಕಮಗಳೂರು: ಹೃದಯಾಘಾತಕ್ಕೆ ಒಂದೇ ದಿನ ಇಬ್ಬರು ಬಲಿ
Next articleಹೃದಯಾಘಾತ ವ್ಯಾಕ್ಸಿನ್ ನಿಂದಲ್ಲ