18 ಕುರಿ-ಕುರಿಗಾಹಿ ಸಾವು

0
35
ಕುರಿ-ಕುರಿಗಾಹಿ ಸಾವು

ಕುಷ್ಟಗಿ: ಡೀಸೆಲ್ ಟ್ಯಾಂಕರ್ ಹರಿದು ವಲಸೆ ಕುರಿಗಾಹಿ ಸೇರಿದಂತೆ 18 ಕುರಿ ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ತಾಲೂಕಿನ ನಿಡಶೇಸಿ ಕೆರೆಯ ಗಾರ್ಡನ್ ಬಳಿ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಡಿ ಗ್ರಾಮದ ಯಲ್ಲಪ್ಪ ಬಸಪ್ಪ ಮೃತ ದುರ್ದೈವಿ. ಕುರಿಗಾಹಿ ಗಂಗಾವತಿಯಿಂದ ಹುಬ್ಬಳ್ಳಿ ಕಡೆ ಕುಷ್ಟಗಿ ಮೂಲಕ ಗಜೇಂದ್ರಗಡ ರಸ್ತೆಯಲ್ಲಿ ಹೊರಟಿದ್ದ. ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪಿಎಸ್‌ಐ ಮೌನೇಶ್ ರಾಥೋಡ್, ಲಾರಿ ಚಾಲಕ ಬಸಪ್ಪ ಚಂದ್ರಶೇಖರನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಎದುರಿನ ವಾಹನ ಫೋಕಸ್ ಲೈಟ್ ಬೆಳಕಿಗೆ ಕುರಿ ಮಂದೆ ಕಾಣಲಿಲ್ಲ ಎಂದು ವಿಚಾರಣೆ ವೇಳೆ ಚಾಲಕ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮತ್ತೆ ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ
Next article