ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 19ನೇ ರ‍್ಯಾಂಕ್

0
34

ಹುಬ್ಬಳ್ಳಿ ವಿಮಾನ ನಿಲ್ದಾಣ ಗ್ರಾಹಕರ ಸಂತೃಪ್ತಿ ಸೇವೆಯ ಸರ್ವೇಯಲ್ಲಿ 19ನೇ ರ‍್ಯಾಂಕ್‌ಗಳಿಸಿ ಸಾಧನೆ ಮಾಡಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಎಎಐ) ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. 55 ಮಧ್ಯಮ ವರ್ಗದ ವಿಮಾನ ನಿಲ್ದಾಣಗಳ ಸರ್ವೇ ನಡೆಸಿದ್ದು, ಅದರಲ್ಲಿ 19ನೇ ಸ್ಥಾನವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಪಡೆದುಕೊಂಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಗ್ರಾಹಕರ ಸಂತೃಪ್ತಿ ಸೇವೆಯ ಇಂಡೆಕ್ಸ್‌ನಲ್ಲಿ 4.68 ಪಾಯಿಂಟ್ಸ್ ಪಡೆದುಕೊಂಡು ಈ ಸಾಧನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಹುಬ್ಬಳ್ಳಿ ವಿಮಾನ ನಿಲ್ದಾಣ 2021ರಲ್ಲಿ ಮೊದಲ ಆರು ತಿಂಗಳಲ್ಲಿ 45ನೇ ರ‍್ಯಾಂಕ್‌ನಲ್ಲಿತ್ತು. ನಂತರ 30ನೇ ರ‍್ಯಾಂಕ್ ಹೊಂದಿತ್ತು.

Previous articleತಲೆ ಮೇಲೆ ಕಲ್ಲು ಹೊತ್ತು ವಿಜಯಪುರಕ್ಕೆ ಪಾದಯಾತ್ರೆ
Next articleಸಿಎಂ ಬದಲಾವಣೆ ಕಪೋಲಕಲ್ಪಿತ