ಸಿದ್ದರಾಮೋತ್ಸವ ಸ್ಟೀರಾಯ್ಡ್ ಇದ್ದಂತೆ

0
41
C C Patil

ಸಿದ್ದರಾಮೋತ್ಸವ ಸ್ಟೀರಾಯ್ಡ್ ಇದ್ದಂತೆ, ಸ್ಟೀರಾಯ್ಡ್ ಪರಿಣಾಮ ಬಹಳ ಹೊತ್ತಿರುವದಿಲ್ಲ. ಸಿದ್ಧರಾಮೋತ್ಸವ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಎಂಟು ತಿಂಗಳವರೆಗೆ ಈ ಸ್ಟೀರಾಯ್ಡ್ ಶಕ್ತಿ ನಿಲ್ಲೋದಿಲ್ಲವೆಂದು ಸಚಿವ ಸಿ.ಸಿ. ಪಾಟೀಲ ಲೇವಡಿ ಮಾಡಿದ್ದಾರೆ.
ಗದುಗಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗುರಿ 150+ ಇದೆ. ಇದಕ್ಕಾಗಿ ಬಿಜೆಪಿಗರು ಡಂಗೂರು ಬಾರಿಸೋ ಅವಶ್ಯಕತೆ ಇಲ್ಲ ಎಂದು ಸ್ಪಷ್ಠಪಡಿಸಿದರು.
ಕಾಂಗ್ರೆಸ್‌ನಲ್ಲಿ ಎಷ್ಟರಮಟ್ಟಿಗೆ ಒಗ್ಗಟ್ಟಿದೆಯೆಂಬುದನ್ನು ಗೊತ್ತಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಇಬ್ಬರ ಆಲಿಂಗನ ಮಾಡಿಸಿದ್ದು ರಾಹುಲ್ ಗಾಂಧಿ ಎಂದರು. ಕಾಂಗ್ರೆಸ್ಸಿಗರು ಇಂತದ್ದೊಂದು ಸಮಾವೇಶ ಮಾಡಿ ಖುಷಿಪಟ್ಟಿರಬಹುದು. ಇಂತಹ ಸಮಾವೇಶ ಬಿಜೆಪಿಯಲ್ಲಿ ದಿನಕ್ಕೊಂದು ಮಾಡುತ್ತಿದ್ದೇವೆ. ಕಾಂಗ್ರೆಸ್‌ನಲ್ಲಿ ನಾನಾ ನೀನಾ ಎಂದು ತೋರಿಸಲು ಸಮಾವೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿ.ಸಿ. ಪಾಟೀಲ
Previous articleಸಿದ್ದರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಇರಲಿ ಬಿಜೆಪಿಗರ ತಕರಾರು ಯಾಕೆ…?
Next articleಶರಣರ ವಚನ ಅರಿವು ಮೂಡಿಸಿ