ಸಿಎಂ ಸೇರಿ ಎಲ್ಲರೂ ಭ್ರಷ್ಟರು: ಕೆಂಪಣ್ಣ

0
25

ರಾಜ್ಯದ ಕಮಿಷನ್ ಗಲಾಟೆ ಮತ್ತೆ ಪ್ರಧಾನಿ ಅಂಗಳಕ್ಕೆ ಬಂದಿದೆ. ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು, ಶಾಸಕರು ಎಲ್ಲರೂ ಭ್ರಷ್ಟರಾಗಿದ್ದಾರೆ. ಮುಂದಿನ 15 ದಿನದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರ ಗುತ್ತಿಗೆದಾರರಿಂದ ಕಮಿಷನ್​ಗೆ ಬೇಡಿಕೆ ಇಡುತ್ತಿರುವ ಕುರಿತು ಪತ್ರ ಬರೆಯುವುದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.
ಕೆಂಪಣ್ಣ ನೇತೃತ್ವದ ನಿಯೋಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಗೆ ದೂರು ಕೊಟ್ಟು ಒಂದು ವರ್ಷ ಕಳೆದಿದೆ. ಪರ್ಸೆಂಟೇಜ್​ ದಂಧೆ ಬಗ್ಗೆ ಯಾವ ಕ್ರಮವೂ ಆಗಿಲ್ಲ, ಪ್ರಧಾನಿ ಭೇಟಿಗೆ ಅವಕಾಶ ಕೊಟ್ರೆ ದಾಖಲೆ ನೀಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು.

Previous articleಕಾಂಗ್ರೆಸ್‌ನವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ
Next articleಕೆಂಪಣ್ಣ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಸಿಎಂ