ಶಾಸಕ ಗಂಟಿಹೊಳೆ ಕಾರು ಅಪಘಾತ

0
34

ಉಡುಪಿ: ಜಾನುವಾರು ಅಡ್ಡ ಬಂದ ಪರಿಣಾಮ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರು ಸೇರಿ ಮೂರು ಕಾರುಗಳು ಶುಕ್ರವಾರ ಸಂಜೆ ಹೊಸನಗರ ಕೋಡೂರು ಬಳಿ ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. ಸರಣಿ ಅಪಘಾತದಲ್ಲಿ ಶಾಸಕರ ಕಾರು ಸೇರಿದಂತೆ 3 ಕಾರುಗಳು ಸ್ವಲ್ಪ ಮಟ್ಟಿಗೆ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ರಿಪ್ಪನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ ಮರಳಿ ಬೈಂದೂರು ಕಡೆ ಪ್ರಯಾಣ ಬೆಳೆಸಿದರು.

Previous articleಚಿತ್ರದುರ್ಗ ಕಾರಾಗೃಹದಲ್ಲಿ ಯೋಗ ದಿನಾಚರಣೆ
Next articleಶಾಸಕ ಸುನಿಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಯಬೇಕಾಗಿಲ್ಲ