ಯಡಿಯೂರಪ್ಪ ಬಲ ಪಡಿಸಲು ವೀರಶೈವ ಲಿಂಗಾಯತರ ಸಭೆ

0
43

ದಾವಣಗೆರೆ: ಯಡಿಯೂರಪ್ಪ ಮತ್ತು ಬಿ. ವೈ. ವಿಜಯೇಂದ್ರ ಅವರನ್ನು ಬೆಂಬಲಿಸಿ 3 ಜಿಲ್ಲೆಗಳ ವೀರಶೈವ ಲಿಂಗಾಯತ ಮುಖಂಡರ ಸಭೆ ಇಂದು ವಿದ್ಯಾನಗರದ ಬೈ ಪಾಸ್ ರಸ್ತೆಯಲ್ಲಿನ ಸಮೃದ್ಧಿ ಫಂಕ್ಷನ್ ಹಾಲ್‌ನಲ್ಲಿ ಆರಂಭ ಆಗಿದೆ.
ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ್, ಮಾಡಾಳು ವಿರೂಪಾಕ್ಷಪ್ಪ, ಮಾಜಿ ಮೇಯರ್ ಗಳಾದ ಅಜಯಕುಮಾರ್ ಸೇರಿದಂತೆ ಹಲವು ನಾಯಕರು ಯಡಿಯೂರಪ್ಪನವರ ಜೊತೆ ನಾವಿದ್ದೇವೆ. ಬಿ.ವೈ. ವಿಜಯೇಂದ್ರ ಜೊತೆ ಇದ್ದೇವೆ ಎಂದು ನಿರೂಪಿಯಲು ನಾವೆಲ್ಲ ಸೇರಿದ್ದೇವೆ ಎಂದು ಘೋಷಿಸಿದರು.

Previous articleಉತ್ತರಾಖಂಡ್​​ನಲ್ಲಿ ಭಾರೀ ಹಿಮಪಾತ: ಕಾರ್ಮಿಕರ ರಕ್ಷಣೆಗೆ ಮೋದಿಯಿಂದ ಅಗತ್ಯ ನೆರವಿನ ಭರವಸೆ
Next articleಹಕ್ಕಿಜ್ವರ: ಹೆಚ್ಚಿನ ಆತಂಕ ಬೇಡ