ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಹೊಳಿಮಠ ನಿಧನ

0
19
ಗುರುಲಿಂಗಸ್ವಾಮಿ ಹೊಳಿಮಠ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಜಿಮ್‌ಗೆ ಹೋಗಿದ್ದ ಅವರು ಕುಸಿದುಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
ಕನ್ನಡಪ್ರಭ, ವಿಜಯ ಕರ್ನಾಟಕ, ಈಟಿವಿ, ನ್ಯೂಸ್ 18, ಟಿವಿ5 ಸೇರಿದಂತೆ ವಿವಿಧ ಪತ್ರಿಕೆ, ನ್ಯೂಸ್ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದ ಗುರುಲಿಂಗಸ್ವಾಮಿ ಅವರು, ಬಸವರಾಜ ಬೊಮ್ಮಾಾಯಿ ಅವರು ಗೃಹ ಸಚಿವರಾಗಿದ್ದಾಗಲೂ ಮಾಧ್ಯಮ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಮುಂಜಾನೆ 10ಗಂಟೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನೇರವೇರಿಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಗುರುಲಿಂಗಸ್ವಾಮಿ ಹೊಳಿಮಠ
Previous articleಭಂಡತನದ ಹೇಳಿಕೆ ಯಾರೂ ಒಪ್ಪುವದಿಲ್ಲ: ಬಿ.ವೈ. ವಿಜಯೇಂದ್ರ
Next article46.23 ಲಕ್ಷ ಕದ್ದ ಮೂವರ ಆರೋಪಿಗಳ ಬಂಧನ