ಮಕ್ಕಳಕೂಟದ ಜತೆ ಗುಬ್ಬಿಮರಿ ಕಥೆ-ವ್ಯಥೆ

0
29
ಮಕ್ಕಳಕೂಟ

ಗುಬ್ಬಿಮರಿ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದು ಮಕ್ಕಳ ಚಿತ್ರವೇ. ಆದರೆ ಮಕ್ಕಳಷ್ಟೇ ನೋಡುವಂಥ ಚಿತ್ರವಲ್ಲ. ಹಿರಿಯರೂ ಇದನ್ನು ನೋಡಿ ಕಲಿಯುವಂತ ಸಾಕಷ್ಟು ಅಂಶ ಸಿನಿಮಾದಲ್ಲಿದೆ' ಎಂದರು ನಿರ್ದೇಶಕ ಮಧು ಡಕಣಾಚಾರ್. ಅವರ ನಿರ್ದೇಶನದ ಗುಬ್ಬಿಮರಿ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಅನಿಸಿಕೆ ಹಂಚಿಕೊಂಡರು. ಇದೇ ವೇಳೆ ಈ ಚಿತ್ರದ ಟ್ರೇಲರ್ ಸಹ ರಿಲೀಸ್ ಮಾಡಲಾಯ್ತು. ತಾಯಿಯಾಗಿ, ಹೆಂಡತಿಯಾಗಿ ಎಲ್ಲರೂ ಹೆಣ್ಣನ್ನು ಪೂಜಿಸುತ್ತಾರೆ. ಆದರೆ ಅದೇ ಮಗುವಿನ ವಿಷಯದಲ್ಲಿ ಹೆಣ್ಣಿನ ಬಗ್ಗೆ ತಾತ್ಸಾರವಿದೆ. ಅದು ತಪ್ಪು. ಹೆಣ್ಣು ಭ್ರೂಣ ಹತ್ಯೆ ಎಂಥ ಘೋರ ಎಂಬುದನ್ನು ಈ ಸಿನಿಮಾದಲ್ಲಿ ಅನಾವರಣ ಮಾಡುವ ಪ್ರಯತ್ನ ಮಾಡಿದ್ದೇನೆ’ ಎಂದರು ಡಕಣಾಚಾರ್. ಆನಂದ ಬಾಬು, ಡಾ.ನಿಶ್ಚಿತಾ ಈ ಚಿತ್ರದ ನಿರ್ಮಾಪಕರು. ಎ.ಟಿ.ರವೀಶ್ ಸಿನಿಮಾಗೆ ಸಂಗೀತ ನೀಡಿದ್ದು, ಶೀಘ್ರವೇ ಈ ಚಿತ್ರವನ್ನು ತೆರೆ ಕಾಣಿಸುವ ಪ್ರಯತ್ನದಲ್ಲಿರುವುದಾಗಿ ಹೇಳಿದರು ನಿರ್ಮಾಪಕರು.
ಮಾಸ್ಟರ್ ಚಿನ್ಮಯ್, ಮಾ. ಸಂಜಯ್, ಸಿಂಧು, ಕಾಮಿಡಿ ಕಿಲಾಡಿಗಳು ಸಂತು, ಮಂಗಳಮುಖಿ ಪ್ರಿಯಾಂಕಾ ಸೇರಿದಂತೆ ಅನೇಕರು ಗುಬ್ಬಿಮರಿ ಸಿನಿಮಾದ ತಾರಾಬಳಗ. ದೀಪು ಮತ್ತು ಸಿದ್ದು ಈ ಚಿತ್ರದ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಸುಂದರ್ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ.

ಮಕ್ಕಳಕೂಟ
Previous articleಮಹಾಜನಗಳೇ ಕೇಳ್ರಪೋ ಕೇಳಿ ಪ್ರಶಸ್ತಿಗಳು ಬಿಕರಿಗಿವೆ…
Next articleವಿಂಟೇಜ್‌ ಸಿನಿಮಾಕ್ಕೆ ವಿಶೇಷ ನಾಮಕರಣ