ಭೀಮಾ ನದಿಗೆ ಬಿದ್ದ ಕಬ್ಬು ತುಂಬಿದ ಲಾರಿ

0
35

ಕಲಬುರಗಿ(ಅಫಜಲಪುರ): ಕಬ್ಬು ತುಂಬಿದ ಲಾರಿಯೊಂದು ಕಾರ್ಖಾನೆಗೆ ಹೋಗುವಾಗ ತಾಲೂಕಿನ ದೇವಲ ಗಾಣಗಾಪೂರದಲ್ಲಿನ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲಿಂದ ನದಿಗೆ ಉರುಳಿ ಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಪಿಎಸ್‌ಐ ರಾಹುಲ್ ಪವಾಡೆ ಘಟನೆ ಕುರಿತು ಮಾಹಿತಿ ನೀಡಿದ್ದು ಕಬ್ಬು ತುಂಬಿದ ಲಾರಿ ಸಮೇತ ನದಿಗೆ ಉರುಳಿ ಬಿದ್ದಿದ್ದು ಚಾಲಕ ನೀರಿನಾಳದಲ್ಲಿ ಸಿಲುಕಿದ್ದಾನಾ ಅಥವಾ ಮೇಲೆದ್ದು ಬಂದಿದ್ದಾನಾ ತಿಳಿಯುತ್ತಿಲ್ಲ. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ಮಾಡಿಸಲಾಗುತ್ತಿದೆ. ಸ್ಥಳಕ್ಕೆ ಸಿಪಿಐ ಚನ್ನಯ್ಯ ಹಿರೇಮಠ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

Previous articleಆರೋಪಿಗೆ ಪೊಲೀಸರಿಂದ ಗುಂಡೇಟು
Next articleಹೊಸ ವರ್ಷಾಚರಣೆ: ಕಾಫಿನಾಡಿಗೆ ಪ್ರವಾಸಿಗರ ದಾಂಗುಡಿ