ದಾವಣಗೆರೆ: ದಾವಣಗೆರೆ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಉಪಲೋಕಾಯುಕ್ತ ಬಿ.ವೀರಪ್ಪ ಬೆಳ್ಳಂಬೆಳಗ್ಗೆ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. ರಾತ್ರಿಯಲ್ಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆಳಗಾಗುವುದನ್ನೇ ಎದುರು ನೋಡುತ್ತಿದ್ದ ಅಧಿಕಾರಿಗಳಿಗೆ ಭೇಟಿ ನೀಡುವ ಮೂಲಕ ಶಾಕ್ ಮೂಡಿಸಿದ್ದಾರೆ.
ಬೆಳಗ್ಗೆ ೬ ಗಂಟೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸುತ್ತಾಡಿದ ಉಪಲೋಕಾಯುಕ್ತ ಬಿ.ವೀರಪ್ಪ, ತರಕಾರಿ ಮಾರಾಟ ಮಹಿಳೆಯರು, ವರ್ತಕರು, ಸಾರ್ವಜನಿಕರ ಅಹವಾಲು ಆಲಿಸಿದರು.
ಕಲ್ಲೇಶ್ವರ ಎಂಟರ್ ಪ್ರೈಸಸ್ ಇವರು ರಸೀದಿ ಪುಸ್ತಕವಿಟ್ಟಿಲ್ಲ. ರೈತರಿಂದ ಕಮೀಷನ್ ತೆಗೆದುಕೊಳ್ಳುವಂತಿಲ್ಲ. ಮೂಲ ರಸೀದಿಯನ್ನೆ ಕೊಡಬೇಕೆಂದು ಸೂಚನೆ ನೀಡಿ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೂಕ, ಅಳತೆ ಯಂತ್ರ ಪರಿಶೀಲನೆ ನಡೆಸಿ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಲು ಸೂಚನೆ ನೀಡಿ ತೂಕದ ಯಂತ್ರ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದಾರೆ.
ಒಟ್ಟಾರೆ ಇಡೀ ದಿನ ಜಿಲ್ಲೆಯಲ್ಲಿ ಭೇಟಿ ನೀಡಲಿರುವ ಉಪಲೋಕಾಯುಕ್ತರು ಅಧಿಕಾರಿಗಳ ನೆಮ್ಮದಿ ಕಿತ್ತುಕೊಂಡಿರುವುದಂತೂ ಸತ್ಯ.