ಬಸ್‌ ನಿಲ್ಲಿಸದ್ದಕ್ಕೆ ಅನ್ಯಕೋಮಿನವರಿಂದ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ

0
33

ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲಿಸದೇ ಇದ್ದುದಕ್ಕೆ ಅನ್ಯಕೋಮಿನ ಯುವಕರು ಚಾಲಕ ಮತ್ತು ನಿರ್ವಾಹಕರ ಮೇಲೆ ಕಲ್ಲೆಸೆದು ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ರಸ್ತೆಯಲ್ಲಿ ನಡೆದಿದೆ.
ಕಲ್ಲು ತೂರಾಟದ ವೇಳೆ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಬಳಿಕ ಯುವಕರನ್ನು ಹಿಡಿದು ಥಳಿಸಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪುಂಡಾಟ ಮಾಡಿದ ಅನ್ಯಕೋಮಿನ ಕುಟುಂಬದವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಎನ್ಕೌಂಟರ್ ಪ್ರಕರಣ: ವಿಚಾರಣೆ ಏ. 28ಕ್ಕೆ ಮುಂದೂಡಿಕೆ
Next articleಸಿಡಿಲು ಬಡಿದು ತಂದೆ ಸಾವು, ಮಗನಿಗೆ ಗಾಯ