ಪತ್ನಿ ಶೀಲ ಶಂಕಿಸಿ ಕೊಲೆಗೈದ ಪತಿ

0
12
ಕೊಲೆ

ರಾಯಚೂರು: ಪತ್ನಿ ಶೀಲ ಶಂಕಿಸಿ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿ ಇಬ್ಬರು ಮಕ್ಕಳೊಂದಿಗೆ ಠಾಣೆಗೆ ಬಂದು ಶರಣಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ. ಗುಡದನಾಳ ಗ್ರಾಮದ ಜೆಟ್ಟೆಪ್ಪ ತನ್ನ ಹೆಂಡತಿ 26 ವರ್ಷದ ರೇಣುಕಾಳನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸಂಬುಡ ಗ್ರಾಮದ ರೇಣುಕಾಳ 6-7 ವರ್ಷಗಳ ಮದುವೆ ಆಗಿದ್ದಳು. ಅದೇ ಗ್ರಾಮದ ಬೇರೆ ವ್ಯಕ್ತಿಯ ಜತೆ ಹೆಂಡತಿ ಪೋನ್‌ನಲ್ಲಿ ಮಾತಾಡುತ್ತಿದ್ದಾಳೆ ಎಂದು ಗಂಡ ಅನುಮಾನಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಮಂಗಳವಾರ ಸಂಜೆ ಕೂಡ ಇದೇ ವಿಚಾರವಾಗಿ ಜಗಳವಾಗಿತ್ತು. ರೇಣುಕಾ ಇಂದು ಬೆಳಗ್ಗೆ ತವರು ಮನೆಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಗಂಡ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ನಂತರ ಜೆಟ್ಟಪ್ಪ ಮಕ್ಕಳೊಂದಿಗೆ ಲಿಂಗಸೂಗುರು ಠಾಣೆಗೆ ಬಂದು ಶರಣಾಗಿದ್ದಾನೆ.

ಕೊಲೆ
Previous article“ಮೇಕ್​ ಇಂಡಿಯಾ ನಂಬರ್​ 1” ಮಿಷನ್​​ಗೆ ಚಾಲನೆ
Next article೧೯ರಂದು ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ