ಪಂಚಮಸಾಲಿ ಹೋರಾಟದ ಮೇಲೆ ಬಲಪ್ರಯೋಗ

0
28

ಹುಬ್ಬಳ್ಳಿ: ಪಂಚಮಸಾಲಿ ಹೋರಾಟ ಶಾಂತಿಯುತವಾಗಿ ಹೋರಾಟ ಮಾಡಲಾಗಿತ್ತು. ಆದರೆ ಸರಕಾರ ಮಿನಿಮಮ್ ಬಲ ಪ್ರಯೋಗ ಮಾಡಬಹುದಿತ್ತು. ಆದರೆ ಮಾಕ್ಸಿಮಮ್ ಬಲ ಪ್ರಯೋಗ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ವಿಚಾರವಾಗಿ ನನಗೆ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ್ ಹಾಗೂ ಶ್ರೀಗಳು ಕರೆ ಮಾಡಿದ್ದರು. ನನಗೆ ಬಂದಿರುವ ಮಾಹಿತಿ ಪ್ರಕಾರ, ಶಾಂತಿಯುತವಾಗಿ ಹೋರಾಟ ಮಾಡಲಾಗಿತ್ತು. ಆದರೆ ಸರಕಾರ ಬಲಪ್ರಯೋಗ ಮಾಡಿದೆ. ವೈರಿಗಳ ತರಹ ಅವರನ್ನು ನಡೆಸಿಕೊಂಡಿದ್ದಾರೆ. ಇದನ್ನು ಅತ್ಯಂತ ತೀವೃವಾಗಿ ನಾನು ಖಂಡಿಸುತ್ತೇನೆ ಎಂದರು.
ಹೋರಾಟ ಮಾಡಿದವರು ಗುಂಡಾಗಳಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟಗಾರರ ಮೇಲೆ ಹಲ್ಲೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಬೇಜಾವ್ದಾರಿಯಾಗಿ ಮಾತಾನಾಡುತ್ತಿದ್ದಾರೆ ಎಂದರು.
ಅನ್ವರ ಮಣಪ್ಪಾಡಿ ಅವರು ವಿಜಯೇಂದ್ರ ನಮ್ಮ ಮನೆಗೆ ಬಂದಿದ್ದ ಎಂದು ಹೇಳಿಲ್ಲ. ಕಾಂಗ್ರೆಸ್ ಮಾಡಿರುವ ಅಪಚಾರ ಮುಚ್ಚಿಕೊಳ್ಳಲು ಆರೋಪ ಮಾಡುತ್ತಿದೆ. ಕೊವೀಡ್ ವಿಚಾರವಾಗಿ ಬೆದರಿಸುವ ತಂತ್ರ ಮಾಡುತಿದ್ದಾರೆ. ಹೆದರುವುದಿಲ್ಲ ಎಂದ ತಕ್ಷಣ ಎಫ್‌ಐಆರ್ ಮಾಡಿದ್ದಾರೆ ಎಂದರು.

Previous articleಆರಂಭವಾದ ಬಿ.ವೈ.ವಿಜಯೇಂದ್ರ ನಿಷ್ಠರ ಸಭೆ
Next articleರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ ನೀಡಿದೆ ಶಿಲ್ಪಾ ಶೆಟ್ಟಿ