ನಾನು ಸಿದ್ಧರಾಮೋತ್ಸವ, ಡಿಕೆಶಿ ಉತ್ಸವಕ್ಕೆ ಹೋಗಿರಲಿಲ್ಲ

0
32
b c patil

ನಾನು ಸಿದ್ದರಾಮೋತ್ಸವ, ಡಿಕೆಶಿ ಉತ್ಸವಕ್ಕೆ ಹೋಗಿರಲಿಲ್ಲ. ಕೃಷಿಗೆ ಸಂಬಂಧಪಟ್ಟ ಜಾಗತಿಕ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳಿದ್ದೆ. ವಿದೇಶದಲ್ಲಿದ್ದರೂ¸ ಕೃಷಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿದೇಶದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಕಾಂಗ್ರೆಸ್‌ನವರು ಕೃಷಿ ಸಚಿವರು ಕಾಣೆಯಾಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದಾರೆ. ಇದರ ಬಗ್ಗೆ ನಾನು ಏನೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಸಿದ್ದರಾಮೋತ್ಸವ, ಡಿಕೆಶಿ ಉತ್ಸವಕ್ಕೆ ಹೋಗಿರಲಿಲ್ಲ. ಉತ್ಸವಗಳನ್ನು ಜನರು ನೋಡಿ ಆನಂದಿಸುತ್ತಾರೆಯೇ ಹೊರತು ಅವುಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪ್ರತ್ಯುತ್ತರ ನೀಡಿದರು.

Previous article24,680 ಗ್ರಾಮಗಳಿಗೆ 4ಜಿ ಸೌಲಭ್ಯ
Next articleಗಣೇಶ ಹಬ್ಬ ಒಂದು ಧರ್ಮಕ್ಕೆ ಸೀಮಿತವಲ್ಲ