ಜಾತ್ರೆಯಲ್ಲಿ ಕಲುಷಿತ ಆಹಾರ, ನೀರು ಸೇವಿಸಿ 10ಜನ ಅಸ್ವಸ್ಥ

0
15

ಬ್ಯಾಡಗಿ: ಜಾತ್ರೆಯಲ್ಲಿ ಕಲುಷಿತ ಆಹಾರ ಹಾಗೂ ನೀರು ಸೇವಿಸಿದ ಪರಿಣಾಮ ತಾಲೂಕಿನ ಕಾಶಂಬಿ ಗ್ರಾಮದ ೧೦ ಜನರಿಗೆ ವಾಂತಿಭೇದಿ ಸೇರಿದಂತೆ ವಿವಿಧ ಆರೋಗ್ಯ ತೊಂದರೆ ಕಾಣಿಸಿಕೊಂಡ ಪರಿಣಾಮ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಜರುಗಿದೆ.
ಗ್ರಾಮದ ೪೦ಕ್ಕೂ ಹೆಚ್ಚು ಜನರು ರಾಣೆಬೆನ್ನೂರು ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಹೊನ್ನಮ್ಮದೇವಿ ಜಾತ್ರೆಗೆ ಮಾ. ೨೫ರಂದು ತೆರಳಿದ್ದು, ಗುರುವಾರ ತಮ್ಮೂರಿಗೆ ಮರಳಿದ್ದಾರೆ. ಮರುದಿನ ೧೦ ಜನರಲ್ಲಿ ವಾಂತಿಭೇದಿ ಶುರುವಾಗಿದ್ದು, ತಕ್ಷಣ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಈಗ ಚಿಕಿತ್ಸೆ ಪಡೆದು ಎಲ್ಲರೂ ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Previous articleಕಾಂಗ್ರೆಸ್‌ನವರು ತೆರಿಗೆ ವಂಚನೆ ಮಾಡಿದರೆ ಪ್ರಶ್ನಿಸಬಾರದೇ
Next articleಆತ್ಮಲಿಂಗಕ್ಕೆ ಹೈಕೋರ್ಟ್ ಜಡ್ಜ್ ವಿಶೇಷ ಪೂಜೆ