ಜನಾರ್ದನ ರೆಡ್ಡಿ:ಶಾಸಕ ಸ್ಥಾನದ ಅನರ್ಹ ಆದೇಶಕ್ಕೆ ತಡೆ

0
51

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದ ಆದೇಶಕ್ಕೆ ಕರ್ನಾಟಕ ವಿಧಾನಸಭಾ ಸಚಿವಾಲಯ ತಡೆ ನೀಡಿದೆ.
ಸಿಬಿಐ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿ ನೀಡಿದ್ದ ತೀರ್ಪಿಗೆ ತೆಲಂಗಾಣ ಹೈಕೋರ್ಟ್‌ ಜೂ.11ರಂದು ತಡೆ ನೀಡಿ ಗಾಲಿ ಜನಾರ್ದನಾ ರೆಡ್ಡಿಗೆ ಜಾಮೀನು ಮಂಜೂರು ಮಾಡಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಮೇ 6 ರಂದು ತಾವೇ ಹೊರಡಿಸಿದ್ದ ಶಾಸಕತ್ವ ಅನರ್ಹ ಆದೇಶಕ್ಕೆ ಜೂ.18 ರಂದು ತಡೆ ನೀಡಿದ್ದಾರೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಅನರ್ಹ ಆದೇಶಕ್ಕೆ ತಡೆ ಇರಲಿದೆ.

Previous articleಅಧ್ಯಕ್ಷ ಸ್ಥಾನಕ್ಕೆ ಡಿ. ಕೆ. ಸುರೇಶ್ ನಾಮಪತ್ರ
Next articleಕೆರೆಯಲ್ಲಿ ಕಾಲು‌ಜಾರಿ ಬಿದ್ದು ಅವಳಿ ಕಂದಮ್ಮಗಳ ಸಾವು