ಖೋಟಾ ನೋಟು ಚಲಾವಣೆ: ಐವರು ಆರೋಪಿಗಳ ಬಂಧನ

0
22
ಖೋಟಾ ನೋಟು

ಹೊಸಪೇಟೆ: ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಬೇರೆ ಬೇರೆ ಜಿಲ್ಲೆಗಳ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 500 ರೂ. ಮುಖ ಬೆಲೆಯ 1 ಲಕ್ಷದ 56 ಸಾವಿರ ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ನೋಟು ಚಲಾವಣೆಗೆ ಬಂದಿದ್ದ ದಾವಣಗೆರೆ ಜಿಲ್ಲೆಯ ಕುಬೇರಪ್ಪ(58) ಶಿವಮೊಗ್ಗ ಜಿಲ್ಲೆಯ ರುದ್ರೇಶ್(39) ಮಂಡ್ಯ ಜಿಲ್ಲೆಯ ಎಸ್. ರಾಜೇಶ್(28) ಮೈಸೂರು ಜಿಲ್ಲೆಯ ಪ್ರಶಾಂತ್(30) ಮಂಡ್ಯ ಜಿಲ್ಲೆಯ ರವಿ(30) ಬಂಧಿತ ಆರೋಪಿಗಳು.
ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಯಪ್ರಕಾಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ನಗರದ ರಾಣಿ ಪೇಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್‌ನಲ್ಲಿ ವಾಸವಾಗಿದ್ದು ಸ್ಥಳೀಯರಿಗೆ ನೋಟು ಚಲಾವಣೆ ಮಾಡಲು ಹೊಂಚು ಹಾಕಿದ್ದರು ಎನ್ನಲಾಗಿದೆ. ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ತಂಡ ಕಾರ್ಯಾಚರಣೆ ನಡೆಸಿದ್ದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖೋಟಾ ನೋಟು
Previous articleರಾಜ್ಯಮಟ್ಟದ ಕಿತ್ತೂರ ಉತ್ಸವಕ್ಕೆ ಸಕಲ ಸಿದ್ಧತೆ
Next articleರಾಜ್ಯಾಧ್ಯಕ್ಷರಾಗಲು ಹತ್ತಾರು ಜನರು ಅರ್ಹರಿದ್ದಾರೆ: ಸುನೀಲಕುಮಾರ