ನೂತನ ಮುಖ್ಯಮಂತ್ರಿಯಾಗಿ ಸೆಪ್ಟೆಂಬರ್ 21ರಂದು ಪ್ರಮಾಣವಚನ ಸ್ವೀಕರಿಸಿದ ಅತಿಶಿ ಇಂದು ಅಧಿಕಾರ ವಹಿಸಿಕೊಂಡರು. ಆದರೆ, ಅತಿಶಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಸನದ ಮೇಲೆ ಕುಳಿತುಕೊಳ್ಳದೆ ಅದನ್ನು ಖಾಲಿ ಇರಿಸಿದರು. ಕೇಜ್ರಿವಾಲ್ ಕೂರುತ್ತಿದ್ದ ಕುರ್ಚಿಯ ಪಕ್ಕದಲ್ಲಿ ಬೇರೆ ಕುರ್ಚಿ ಹಾಕಿಕೊಂಡು ಕೂತು ಕಡತಗಳಿಗೆ ಸಹಿ ಹಾಕುವ ಮೂಲಕ ಸಿಎಂ ಆಗಿ ಕೆಲಸ ಆರಂಭಿಸಿದ್ದಾರೆ.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯವನ್ನು ಉದಾಹರಣೆಯಾಗಿ ನೀಡಿ ಶ್ರೀರಾಮ ವನವಾಸಕ್ಕೆ ಹೋದಾಗ ಸಹೋದರ ಭರತ ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ಆಡಳಿತವನ್ನು ನಡೆಸಿದರು. ಅದೇ ರೀತಿ ನಾನು ಕೇಜ್ರಿವಾಲ್ ಸ್ಥಾನದಲ್ಲಿ ಕೂರುವುದಿಲ್ಲ. ಅವರನ್ನು ಮತ್ತೆ ಈ ಸ್ಥಾನಕ್ಕೆ ತರಲು ನಾಲ್ಕು ತಿಂಗಳು ಶ್ರಮಿಸುತ್ತೇನೆ ಎಂದರು.