ಈಶ್ವರಪ್ಪಗೆ ದೆಹಲಿ ಬುಲಾವ್: ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ

0
10

ಶಿವಮೊಗ್ಗ: ನಾಳೆ ದಿನ ದೆಹಲಿಗೆ ಬರಬೇಕು ಎಂದು ಅಮಿತ್ ಶಾ ಕರೆ ಮಾಡಿ ಬರುವಂತೆ ಹೇಳಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು ಅಮಿತ್ ಶಾ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಹಿಡಿತದಲ್ಲಿದೆ ಅದನ್ನ ತಡೆಯಬೇಕು ಎಂಬ ಭಾವನೆಯಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದೇನೆ , ನೊಂದ ಕಾರ್ಯಕರ್ತರ ಭಾವನೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದುತ್ವದ ಬಗ್ಗೆ ಹೋರಾಟ ಮಾಡುವ ನಾಯಕರ ಪರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಅಮಿತ್ ಶಾ ಅವರು ಬಂಡಾಯ ವಾಪಸ್ ಪಡೆದುಕೊಳ್ಳಿ ನಿಮ್ಮ ಬೇಡಿಕೆ ಈಡೇರಿಸೋಣ ಎಂದರು. 3 ತಿಂಗಳ ಹಿಂದೆ ತಮ್ಮ ಬಳಿ ನಾನು ಒಂದು ಮಾತನಾಡಿದರು ಏನು ಬದಲಾವಣೆ ಆಗಿಲ್ಲ. ನಾಳೆ ದಿನ ದೆಹಲಿಗೆ ಬರಬೇಕು ಎಂದು ಅಮಿತ್ ಶಾ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರ ಕೋರಿಕೆಯ ಮೇರೆಗೆ ದೆಹಲಿಗೆ ಹೋಗುತ್ತೇನೆ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

Previous articleಜಯ ಸಿಗುವವರೆಗೆ ಮಾಲೆ ಹಾಕಲ್ಲ
Next articleಎಎಪಿ ನಾಯಕ ಸಂಜಯ್ ಸಿಂಗ್‌ಗೆ ಜಾಮೀನು