ಹೂ ಕಿತ್ತ ಮಕ್ಕಳು, ಮೂಗು ಕತ್ತರಿಸಿದ ಮನೆ ಮಾಲೀಕ!

0
14

ಬೆಳಗಾವಿ: ಅಂಗನವಾಡಿ ಮಕ್ಕಳು ಪಕ್ಕದ ಮನೆಯಲ್ಲಿ ಹೂ ಕಿತ್ತರೂ ಎಂದು ಆರೋಪಿಸಿ ಕೆಲವರು ಅಂಗನವಾಡಿ ಸಹಾಯಕಿಯ ಮೂಗು ಕೊಯ್ದ ಘಟನೆ ಬೆಳಗಾವಿ ಗ್ರಾಮೀಣದಲ್ಲಿ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಬಸುರ್ತೆಯಲ್ಲಿ ಅಂಗನವಾಡಿ ಸಹಾಯಕಿ ಸುಗಂಧಾ ಎಂಬುವರ ಮೇಲೆ ಸ್ಥಳೀಯರಿಂದ ಈ ಕ್ರೌರ್ಯ ನಡೆದಿದ್ದು, ತೀವ್ರ ಅಸ್ವಸ್ಥಳಾದ ಅವರನ್ನು ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಮ್ಮ ಮೇಲೆ ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬುವರೆ ಹಲ್ಲೆ ನಡೆಸಿದ್ದಾಗಿ ಗಾಯಾಳು ಆರೋಪಿಸಿದ್ದು, ಮಕ್ಕಳ ಮಾಡಿದ ತಪ್ಪಿಗೆ ಸಹಾಯಕಿ ಸುಗಂಧಾ ಮೋರೆ ಶಿಕ್ಷೆ ಅನುಭವಿಸುವಂತಾಗಿದೆ. ಜ. ೧ರಂದು ಈ ದುಷ್ಕೃತ್ಯ ನಡೆದಿದೆ.

Previous articleಬದಲಾದ ಕಾನೂನು: ಟ್ರಕ್‌ ಚಾಲಕರ ಆಕ್ರೋಶ
Next articleಬಿಜೆಪಿ ಪ್ರತಿಭಟನೆ: ಪೊಲೀಸ್ ಸರ್ಪಗಾವಲಿನಲ್ಲಿ ಹುಬ್ಬಳ್ಳಿ