ಸ್ನೇಹಮಯಿ ಕೃಷ್ಣ ವಿರುದ್ಧ ಎಂ ಲಕ್ಷ್ಮಣ್ ದೂರು

0
18

ಮೈಸೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಂದು ದೂರು ದಾಖಲಿಸಿದ್ದಾರೆ.
ಕೃಷ್ಣ ವಿರುದ್ಧ ಈಗಾಗಲೇ ಹಲವು ದೂರು ದಾಖಲಿಸಿರುವ ಲಕ್ಷ್ಮಣ್ ಇವತ್ತು ಕೃಷ್ಣರಾಜ ವಿಭಾಗದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದರು. ಸ್ನೇಹಮಯಿ ಕೃಷ್ಣ ಒಬ್ಬ ರೌಡಿಶೀಟರ್ ಮತ್ತು ಅವರ ವಿರುದ್ಧ ಹಲವಾರು ದೂರು ದಾಖಲಾಗಿರುವುದರಿಂದ ಗಡೀಪಾರು ಮಾಡಬೇಕೆಂದು ದೂರಿನಲ್ಲಿ ಕೋರಲಾಗಿದೆ. ಬಳಿಕ ಮಾತನಾಡಿದ ಅವರು, ಸ್ನೇಹಮಹಿ ಕೃಷ್ಣ ರೌಡಿಶೀಟರ್. ಆತನ ಮೇಲೆ 44 ಕೇಸ್ ಗಳಿವೆ. ಆತನ ಮೇಲೆ‌ ಮೂರುವರೆ ವರ್ಷಗಳಿಂದ ಯಾವುದೇ ಸೆಕ್ಯೂರಿಟಿ ಕೇಸ್ ಹಾಕಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡ್ತಿದ್ದಾನೆ. ಸಾರ್ವಜನಿಕ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ. ಈತನನ್ನ ಕೂಡಲೇ ಅರೆಸ್ಟ್ ಮಾಡಬೇಕು. ರೌಡಿಶೀಟರ್ ಆಗಿರುವ ಈತ ಸಿಎಂ ಪತ್ನಿ ಪಾರ್ವತಿ ಅವರ ಹೆಸರಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ. ಆತ ಬಿಡುಗಡೆ ಮಾಡಿರುವ ಚಲನ್ ಹಣ ಕಟ್ಟಿರು ದಾಖಲೆ ಎಲ್ಲಾ ಸುಳ್ಳು. ಆತ ಬಿಡುಗಡೆ ಮಾಡಿರುವ ದಾಖಲೆ ಸುಳ್ಳು ಅಂತಾ ಮುಡಾ ಅಧಿಕಾರಿಗಳೇ ಹೇಳುತ್ತಿದ್ದಾರೆ. ಸ್ನೇಹಮಯಿ ಕೃಷ್ಣನನ್ನ ಕೂಡಲೇ ಬಂಧಿಸಬೇಕು. ಅರೆಸ್ಟ್ ಮಾಡದಿದ್ದರೆ ನಾಳೆಯಿಂದ ಪೋಲಿಸ್ ಠಾಣೆ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದರು.

Previous articleನೀರಿನ ಅವಶ್ಯಕತೆ ಪರಿಗಣಿಸಿ ನೀರು ಪೂರೈಕೆ
Next articleಅಥ್ಲೀಟ್‌ನಂತಹ ಫಿಟ್ನೆಸ್ ಹೊಂದುವುದು ಹೇಗೆ?