ಸರ್ಕಾರದ ಯಾವುದೇ ಬೆದರಿಕೆಗೆ ಮಣಿಯಲ್ಲ, ಹೋರಾಟ ಮುಂದುವರಿಯುತ್ತದೆ

0
23

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚನಸಾಲಿಗಳ ಮೇಲೆ ಗುಂಡು ಹಾರಿಸುವ ಮನಸ್ಥಿತಿಯಲ್ಲಿತ್ತು ಎಂದು ಪಂಚಮಸಾಲಿ ಹೋರಾಟದ ಮುಖಂಡತ್ವವಹಿಸಿದ್ದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ನಗರದ ಚನ್ನಮ್ಮ ವೃತ್ತದಲ್ಲಿ ತಮ್ಮನ್ನು ಭೆಟ್ಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮನ್ನು ಭೇಟಿಯಾಗಲು ಮುಖ್ಯಮಂತ್ರಿ ಹೇಳಿ ಕಳಿಸಿದ ಕಾರಣ ಅಲ್ಲಿಗೆ ಹೋಗುವಾಗ ಲಾಠಿಚಾರ್ಜ್ ಮಾಡಲಾಗಿದೆ. ಅವರೇನೇ ಮಾಡಿದರೂ ತಮ್ಮ ಹೋರಾಟ ನಿಲ್ಲಲ್ಲ ಎಂದು ಸ್ವಾಮಿಜಿ ಹೇಳಿದರು. ಪ್ರತಿಭಟನೆಯ ಮುಂದುವರಿದ ಭಾಗವಾಗಿ ಡಿಸೆಂಬರ್ 12ರಂದು ಪಂಚಮಸಾಲಿ ಸಮುದಾಯದವರು ತಾವಿರುವ ಹಳ್ಳಿ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾಕೇಂದ್ರಗಳಲ್ಲಿ ರಾಸ್ತಾರೋಕೋ ಮಾಡುತ್ತಾರೆ, ಹೋರಾಟದ ಮುಂದಿನ ಹಂತವನ್ನು ಅವತ್ತು ಪ್ರಕಟಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.

Previous articleಅರವಿಂದ ಬೆಲ್ಲದಗೆ ಕಲ್ಲೇಟು
Next articleಆಳ್ವಾಸ್ ವಿರಾಸತ್: ಗಮನ ಸೆಳೆದ ವಿದ್ಯಾರ್ಥಿನಿಯರ ಹುಲಿವೇಷ