ಸರ್ಕಾರದ ಬಳಿ ಏನೇನೂ ಉಳಿದಿಲ್ಲ…

0
39

ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ

ಬೆಂಗಳೂರು: ಕನ್ನಡದ ಬಗ್ಗೆ ‘ಮೊಸಳೆ ಕಣ್ಣೀರು ಸುರಿಸುವ’ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಮುಖವಾಡ ಕಳಚಿಬಿದ್ದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕನ್ನಡ ಶಾಲೆಗಳು ಮುಚ್ಚುತ್ತಿವೆ, ಇರುವ ಶಾಲೆಗಳು ದೈನೇಸಿ ಪರಿಸ್ಥಿತಿಯಲ್ಲಿವೆ, ಆ ಶಾಲೆಗಳಲ್ಲೂ ಶಿಕ್ಷಕರಿಲ್ಲ, 60,000 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ, ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ, ಸರ್ಕಾರದ ಬಳಿ ಏನೇನೂ ಉಳಿದಿಲ್ಲ ಇವರಿಂದ ಕನ್ನಡ ತನ ಹೇಗೆ ಉಳಿಯಲು ಸಾಧ್ಯ? ಎಂದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ. ಈ ಸರ್ಕಾರದಿಂದ ಕನ್ನಡದ ಉದ್ಧಾರ ಸಾಧ್ಯವೇ ಇಲ್ಲ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ, ಶಿಕ್ಷಕರಿಗಂತೂ ಕೆಲಸ ಇಲ್ಲವೇ ಇಲ್ಲ ಎಂಬ ವಾಸ್ತವ ಪರಿಸ್ಥಿತಿಯನ್ನು ಬಿಚ್ಚಿಡಲಾಗಿದೆ. ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ರಾಜ್ಯವಾಗಿಸಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ. ತನ್ನ ಶೂನ್ಯ ಪರಿಸ್ಥಿತಿಯನ್ನು ಮುಚ್ಚಿಕೊಳ್ಳಲು ಕನ್ನಡಿಗರ ದಿಕ್ಕು ತಪ್ಪಿಸುವ ಅಸತ್ಯದ ವಿವಾದಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಗೊಂದಲ ಮೂಡಿಸುತ್ತಿದೆ ಎಂದಿದ್ದಾರೆ.

Previous articleಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ
Next articleಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ