ಸತೀಶ್ ಸೈಲ್ ಶಾಸಕ ಸ್ಥಾನಕ್ಕೆ ಅನರ್ಹ

0
17

ಬೆಂಗಳೂರು :  ಸರ್ಕಾರ ಕೂಡಲೇ ಸತೀಶ್ ಸೈಲ್ ಅವ​ರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಕೋರ್ಟ್ ಶಾಸಕ ಸತೀಶ್ ಸೈಲ್​ರನ್ನು ದೋಷಿ ಎಂದು ತೀರ್ಪು ಕೊಟ್ಟಿದೆ. ಇವತ್ತು ಏಳು ವರ್ಷ ಶಿಕ್ಷೆ ಪ್ರಕಟಿಸಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಎರಡು ವರ್ಷ ಶಿಕ್ಷೆಯಾದ್ರೆ ಶಾಸಕ ಸ್ಥಾನ ಉಳಿಯಲ್ಲ. ಹಾಗಾಗಿ ಈ ತಕ್ಷಣ ಅವರ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಸರ್ಕಾರ ಹಾಗೂ ಸ್ಪೀಕರ್ ಅವರಿಗೆ ಒತ್ತಾಯ ಮಾಡುತ್ತೇನೆ ಎಂದರು.

ಹಿಂದೂ ಹಬ್ಬಗಳಲ್ಲಿ ಮಾತ್ರ ಇವರ ಆರ್ಭಟ : ಹಿಂದೂ ಹಬ್ಬಗಳಿಗೆ ಮಾತ್ರ ನಿಯಮ ಹಾಕುತ್ತಾರೆ. ಪಟಾಕಿ ಹಚ್ಚೋದಿಕ್ಕೆ, ಗಣಪತಿ ಕೂರಿಸಲು ನಿಯಮ ಮಾಡ್ತಾರೆ. ಆದರೆ, ಬೆಳಗಿನಜಾವ 5 ಗಂಟೆಗೆ ಮಸೀದಿಗಳಲ್ಲಿ ಆಜಾನ್, ನಮಾಜ್ ಶುರುವಾಗುತ್ತದೆ. ಇದಕ್ಕೆ ಸರ್ಕಾರದ ನಿಯಮ ಅನ್ವಯ ಆಗೋದಿಲ್ವಾ?, ಹಿಂದೂ ಹಬ್ಬಗಳಿಗೆ ಮಾತ್ರ ಇವರ ಪುರುಷತ್ವ ಮತ್ತು ಆರ್ಭಟ ಇರುತ್ತದೆ.‌ ಪಟಾಕಿ ಸಿಡಿಸುವವರು ಸಿಡಿಸೇ ಸಿಡಿಸ್ತಾರೆ, ಯಾರೂ ಇವರ ಮಾತು ಕೇಳಲ್ಲ ಎಂದರು.

Previous articleಚಿತ್ರಾಪುರದಲ್ಲಿ ಗಾಯತ್ರಿ ಸಂಗಮ, ಆದಿತ್ಯ ಯುವ ಸಂಗಮ
Next articleಮಾಜಿ ಸಚಿವರ ಪುತ್ರನಿಗೆ 20 ಲಕ್ಷ ರೂ. ವಂಚನೆ