ಶಾಸಕರ ಕೊಲೆ ಸಂಚು: ಬಿಜೆಪಿ ದಿಢೀರ್ ಪ್ರತಿಭಟನೆ

0
25

ಕಲಬುರಗಿ: ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಕಲಬುರಗಿ ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ, ಕಲಬುರಗಿ ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಅವರ ಹೆಸರು ಬೀದರ ಮೂಲದ ಗುತ್ತಿಗೆದಾರ ಸಚಿನ್ ಪಂಚಾಳ ಅವರ ಡೆತ್‌ನೋಟದಲ್ಲಿ ಕೊಲೆ ಮಾಡುವ ಸಂಚಿನ ಕುರಿತಾಗಿ ಬರೆದಿಟ್ಟಿರುವ ಬಗ್ಗೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಜಗತ್ ವೃತ್ತದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಟೇಷನ್ ಬಜಾರ ಠಾಣೆಯಲ್ಲಿ ಕೇಸ್ ಪಡೆಯಲು ಹಿಂದೇಟು ಹಾಕಿರುವ ಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು. ಡೆತ್‌ನೋಟದಲ್ಲಿ ಹೆಸರು ಪ್ರಸ್ತಾಪಿಸಿದ್ದು ಕೊಲೆ ಸಂಚು ನಡೆಸಿರುವ ಬಗ್ಗೆ ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಅಮರನಾಥ ಪಾಟೀಲ, ಶಿವಕಾಂತ ಮಹಾಜನ ಸೇರಿ ಅನೇಕರು ಭಾಗವಹಿಸಿದ್ದರು.

Previous articleನವ ವಿವಾಹಿತೆ ನೇಣಿಗೆ ಶರಣು
Next articleಕೊಲೆ ಆರೋಪಿ ಬಂಧನ