ಶವಪೆಟ್ಟಿಗೆ ಹಸ್ತಾಂತರ ವಿಮಾನ ನಿಲ್ದಾಣದ ಗೊಂದಲ

0
13

ಅಹಮದಾಬಾದ್: ಆಸ್ಟ್ರೇಲಿಯಾದಲ್ಲಿ ಈಚೆಗೆ ಮೃತಪಟ್ಟ ಗುಜರಾತಿನ ವ್ಯಕ್ತಿಯೊಬ್ಬರ ಶವವನ್ನು ಸರಕು ಸಾಗಾಟ ವಿಮಾನದಲ್ಲಿ ಸ್ವದೇಶಕ್ಕೆ ತಂದರೂ ಅಹಮದಾಬಾದ್ ವಿಮಾನನಿಲ್ದಾಣದ ಸಿಬ್ಬಂದಿ ಮಾಡಿದ ಪ್ರಮಾದದಿಂದಾಗಿ ಉದ್ಯಮ ಸಂಸ್ಥೆಗೆ ತಲುಪಿದ ವಿಚಿತ್ರ ಘಟನೆ ನಡೆದಿದೆ. ಈ ಶವಪೆಟ್ಟಿಗೆಯನ್ನು ಪರಿಶೀಲಿಸದೇ ಮುಂಬೈ ಕಂಪನಿಯೊಂದರ ಬಿಡಿಭಾಗಗಳ ಸರಕು ಎಂದು ತಪ್ಪಾಗಿ ಗ್ರಹಿಸಿರುವುದು ಈ ರಾದ್ಧಾಂತಕ್ಕೆ ಕಾರಣವಾಗಿದೆ.
ಗುಜರಾತಿನ ಸುರೇಂದ್ರ ನಗರದ ನಿವಾಸಿ ಜೀಲ್ ಖೋಕರ್ ಮಾ.೧೭ರಂದು ಆಸ್ಟ್ರೇಲಿಯಾದಲ್ಲಿ ಮೃತಪಟ್ಟಿದ್ದರು. ಅವರ ಶವಸಂಸ್ಕಾರವನ್ನು ಹುಟ್ಟೂರಾದ ಸುರೇಂದ್ರ ನಗರದಲ್ಲಿ ನೆರವೇರಿಸಲು ಕುಟುಂಬಸ್ಥರು ಬಯಸಿದ್ದರು. ಹೀಗಾಗಿ ಅವರ ಮೃತದೇಹವನ್ನು ಆಸ್ಟ್ರೇಲಿಯಾದಿಂದ ಏರ್ ಇಂಡಿಯಾದ ಸರಕು ಸಾಗಾಟ ವಿಮಾನದಲ್ಲಿ ತರಲಾಯಿತು. ಆದರೆ ಅಹಮದಾಬಾದ್ ವಿಮಾನನಿಲ್ದಾಣದ ಸಿಬ್ಬಂದಿಯ ಎಡವಟ್ಟಿನಿಂದ ಶವಪೆಟ್ಟಿಗೆ ಕುಟುಂಬಸ್ಥರ ಕೈ ಸೇರಲಿಲ್ಲ. ಈ ವಿಷಯ ತಿಳಿದು ಖೋಕರ್ ಕುಟುಂಬಸ್ಥರು ಆತಂಕಗೊಂಡರು. ವಿಮಾನ ನಿಲ್ದಾಣದಲ್ಲಿ ರಾದ್ಧಾಂತವನ್ನೇ ಮಾಡಿದರು.

Previous articleಚುನಾವಣೆಯಲ್ಲಿ ಜೆಡಿಎಸ್ ಆತ್ಮಹತ್ಯೆ
Next articleಕೋಟೆನಾಡು ಪ್ರವೇಶ ಮುನ್ನವೇ ಗೋವಿಂದ ಕಾರಜೋಳಗೆ ವಿಘ್ನ