ವಿವಸ್ತ್ರ ವ್ಯಕ್ತಿಯಿಂದ ಕಲ್ಲೆಸೆತ

0
10

ಮಂಗಳೂರು: ವಿವಸ್ತ್ರವಾಗಿದ್ದ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲೆಸೆಯುತ್ತಿದ್ದ ಘಟನೆ ಕಲ್ಲಾಪು ತೋಕೂರು ರೈಲ್ವೆ ಗೇಟ್ ಬಳಿ ಇಂದು ನಡೆದಿದೆ. ರೈಲ್ವೇ ಗೇಟ್ ಬಿದ್ದ ಕಾರಣ ರೈಲ್ವೆ ಕ್ರಾಸಿಂಗ್ ಬಳಿ ವಾಹನ ಸವಾರರು ಕಾಯುತ್ತಿದ್ದರು. ವ್ಯಕ್ತಿ ಕಲ್ಲೆಸೆಯುತ್ತಿದ್ದರಿಂದ ಬೈಕ್ ಸವಾರನೊಬ್ಬ ಭಯಭೀತಗೊಂಡು ಬೈಕ್ ಬಿಟ್ಟು ಇಳಿದಿದ್ದಾರೆ. ಸವಾರ ಹೆಲ್ಮೆಟ್ ಧರಿಸಿದ ಕಾರಣ ಕಲ್ಲೇಟಿನಿಂದ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ವಾಹನ ಸವಾರರು ೧೧೨ ಕರೆ ಮಾಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವ್ಯಕ್ತಿಯು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದು, ಮಾದಕ ವ್ಯಸನಿ ಅಥವಾ ಮಾನಸಿಕ ಅಸ್ವಸ್ಥನಾಗಿರುವುದಾಗಿ ಶಂಕಿಸಲಾಗಿದೆ. ಈತ ಮದ್ಯವಯಸ್ಕನಾಗಿದ್ದು ಬ್ಯಾಗ್‌ವೊಂದನ್ನು ಧರಿಸಿಕೊಂಡಿದ್ದ ಜೊತೆಗೆ ಸಂಪೂರ್ಣ ನಗ್ನವಾಗಿದ್ದ.

Previous articleಸಂಗೀತ ಲೋಕದ ಧ್ರುವತಾರೆ ಸರೋದ್‌ ವಾದಕ ರಾಜೀವ್ ತಾರಾನಾಥ್‌ ಇನ್ನಿಲ್ಲ
Next articleಶವ ಸಂಸ್ಕಾರದಲ್ಲಿ ಅಮಾನವೀಯ ಘಟನೆ