ವಕ್ಫ್ ವಿವಾದ: ಕೈ ನಾಯಕರ ವಿರುದ್ಧ ಭಾಂಡಗೆ ಪದಪ್ರಯೋಗ..!

0
21

ಬಾಗಲಕೋಟೆ: ವಿಜಯಪುರದ ವಕ್ಫ್ ಬೋರ್ಡ್ ವಿವಾದಕ್ಕೆ ಸಂಬಂಧಿಸಿದಂತೆ ಟೀಕಿಸುವ ಭರದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಕಾಂಗ್ರೆಸ್ ನಾಯಕರನ್ನು ನಾಲಾಯಕರು, ಹಿಜಡಾಗಳು ಎಂದು ನಿಂದಿಸಿದ್ದಾರೆ.
ರವಿವಾರ ಈ ಕುರಿತು ವಿಡಿಯೋ ಪ್ರಕಟಣೆ ನೀಡಿರುವ ಅವರು ಹಿಂದೂಗಳಲ್ಲೂ ಇರುವ ಕೆಲ ನಾಲಾಯಕರು ವಕ್ಫ್ ಬೋರ್ಡ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಜರಿದಿದ್ದಾರೆ. ಜಮೀರ್ ಅಹ್ಮದ್ ಖಾನ್ ಕಾರಿಗೆ ಕಲ್ಲು ಬಿದ್ದು ಆತ ಉಳಿದಿದ್ದಾನೆ. ಆತ ಮಾತನಾಡುವಾಗ ಎಚ್ಚರದಿಂದ ಹೇಳಿಕೆಗಳನ್ನು ನೀಡಬೇಕೆಂದು ಟೀಕಾ ಪ್ರಹಾರ ನಡೆಸಿದ್ದಾರೆ.
ದೇಶದ ತುಂಬ ವಕ್ಫ್ ಬೋರ್ಡ್ ಇದ್ದು, ಎಲ್ಲ ಆಸ್ತಿಯೂ ತಮ್ಮದೆ ಎಂದು ನೋಟಿಸ್ ನೀಡುತ್ತಿದೆ. ಮೊದಲು ಆ ಬೋರ್ಡ್ ರದ್ದಾಗಬೇಕು. ವಕ್ಫ್ ಕಾಯ್ದೆಗೆ ತಿದ್ದುಪಡಿಯಲ್ಲ ಅದು ಸಂಪೂರ್ಣವಾಗಿ ರದ್ದಾಗಬೇಕೆಂಬುದು ನನ್ನ ವಾದ ಈ ಬಗ್ಗೆ ರಾಜ್ಯಸಭೆಯಲ್ಲೂ ಮಾತನಾಡುವೆ ಎಂದು ಘರ್ಜಿಸಿದ್ದಾರೆ.
ಅವರಿಗೆ ಒಂದು ದೇಶ ಕೊಟ್ಟಾದಮೇಲೆ ಪ್ರತ್ಯೇಕವಾಗಿ ಒಂದು ಬೋರ್ಡ್ ಬೇಕಾಗಿಯೇ ಇರಲಿಲ್ಲ. ಅಷ್ಟಿದ್ದರೆ ಹಿಂದೂಗಳಿಗೆ ಒಂದು ಮಂಡಳಿಯನ್ನು ರಚಿಸಿದೆ. ರೈತರ ಜಮೀನುಗಳಿಗೆ ಇವರು ಕೈ ಹಾಕಿದ್ದಾರೆ. ಅವರಜ್ಜ, ಮುತ್ತಾತನ ಕಾಲದಿಂದಲೂ ಉಳುಮೆ ಮಾಡಿಕೊಂಡ ಬಂದು ಜಮೀನು ದಿಢೀರ್ ವಕ್ಫ್ ಆಸ್ತಿ ಹೇಗಾಗುತ್ತದೆ. ಕಾಂಗ್ರೆಸ್ಸಿನ ಕುಮ್ಮಕು ಇದರ ಹಿಂದೆ ಇದೆ. ನಾಳೆ ನಿಮ್ಮ ಆಸ್ತಿಯನ್ನೂ ಅವರು ಬಿಡುವುದಿಲ್ಲ ಎಂದು ಭಾಂಡಗೆ ಆರೋಪಿಸಿದ್ದಾರೆ.

Previous articleವಕ್ಫ್​ ಕಾನೂನು ವಿರುದ್ಧ ಹೋರಾಟ
Next articleಸಿದ್ದರಾಮಯ್ಯ ಕೆಳಗಿಳಿದ ಮೇಲೆ ಸರಕಾರ ಇರಲ್ಲ