ಲೋಕಾಯುಕ್ತ ಬಲೆಗೆ ರಾಜಸ್ವ ನಿರೀಕ್ಷಕ

0
46

ಸಾಗರ: ತಾಳಗುಪ್ಪ ಹೋಬಳಿಯ ರಾಜಸ್ವ ನಿರೀಕ್ಷಕ ಮಂಜುನಾಥ್ ಎನ್ನುವರು ಲಂಚ ಸ್ವೀಕರಿಸುವ ವೇಳೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿರುತ್ತದೆ.
ಶಿರವಂತೆ ಸಮೀಪ ಮುಂಡಗೇಹಳ್ಳ ನಿವಾಸಿ ರೈತರಾದ ಕೃಷ್ಣಮೂರ್ತಿ ಎನ್ನುವವರಿಂದ ರಾಜಸ್ವ ನಿರೀಕ್ಷಕ ಮಂಜುನಾಥ್ ಅವರು ೩ ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಬಲೇಗಾರು ಸಮೀಪ ಅಧಿಕಾರಿಗೆ ಲಂಚದ ಹಣ ಕೊಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿ, ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದು ಸಾಗರ ತಾಲೂಕು ಕಚೇರಿಗೆ ಕರೆತಂದು ವಿಚಾರಣೆ ನಡೆಸಿದರು. ಹೆಚ್ಚಿನ ವಿಚಾರಣೆಗೆ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Previous articleಪ್ರಚೋದನಾತ್ಮಕ ವಿಡಿಯೋ ವೈರಲ್: ಪಾಲಿಕೆ ಸದಸ್ಯನ ವಿರುದ್ಧ ಪ್ರಕರಣ ದಾಖಲು
Next articleಗುತ್ತಿಗೆದಾರರ ಬಾಕಿ ಹಣ ಬಿಡುಗಡೆ