ಕೋಲಾರ: ಜಿಲ್ಲೆ ಮಾಲೂರುತಾ. ಕೊತ್ತೂರು ಗ್ರಾಮದ ರೈತನ ಮೇಲೆ ಕರಡಿ ದಾಳಿ ಮಾಡಿದ್ದು ರೈತ ನಾರಾಯಣಸ್ವಾಮಿ ತೀವ್ರ ಗಾಯಗೊಂಡಿದ್ದಾರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈತ ನಾರಾಯಣಸ್ವಾಮಿ ಮೇಕೆ ಮೇಯಿಸುತ್ತಿದ್ದವನ ಮೇಲೆ ಕರಡಿ ಏಕಾಎಕಿ ದಾಳಿ ಮಾಡಿದ್ದು ರೈತನ ಮುಖ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ, ಕೂಡಲೇ ಗಾಯಾಳು ನಾರಾಯಣ ಸ್ವಾಮಿಯನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕರಡಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಕರಡಿ ಸೆರೆಗೆ ಗ್ರಾಮಸ್ಥರ ಆಗ್ರಹಿಸಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.