ರೆಡ್ಡಿ ವಿರುದ್ಧ ತಿರುಗಿ ಬಿದ್ದ ಶ್ರೀರಾಮುಲು

0
28

ಬೆಂಗಳೂರು: ಆಂಧ್ರಪ್ರದೇಶದ ಚಂಚಲಗುಡ ಜೈಲಿನಿಂದ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಬಿಡುಗಡೆ ಬಳಿಕ ಬಳ್ಳಾರಿ ಜಿಲ್ಲೆಯ ದಶಕದ ಹಿಂದಿನ ಗಣಿಧಣಿಗಳ ಅಂತಃಕಲಹ ಮತ್ತೊಮ್ಮೆ ಆಸ್ಫೋಟಗೊಂಡಿದ್ದು, ಈ ಬಾರಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಆಡಿದ ಮಾತುಗಳು ಗಣಿಧಣಿಗಳ ಕದನಕ್ಕೆ ವೇದಿಕೆ ಕಲ್ಪಿಸಿವೆ.
ರಾಜ್ಯ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಅಗರ್‌ವಾಲ್ ಸಂಡೂರು ಉಪ ಚುನಾವಣೆ ಸೋಲಿನ ಕುರಿತು ಎತ್ತಿದ ಪ್ರಶ್ನೆಗಳಿಂದ ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಬಡಿದೆಬ್ಬಿಸಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸತತ ಎರಡು ಬಾರಿ ಸೋಲು ಅನುಭವಿಸಿ ರಾಜಕೀಯವಾಗಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಶ್ರೀರಾಮುಲು ಅವರನ್ನು ಹಣಿಯಲು ಅಂದಕಾಲತ್ತಿಲ್ ಗೆಳೆಯ ಜನಾರ್ದನ್ ರೆಡ್ಡಿ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅಗರ್‌ವಾಲ್ ಮೂಲಕ ಅಸ್ತç ಪ್ರಯೋಗಿಸಿದ್ದಾರೆ ಎಂಬುದು ಹಳೆಯ ಆಪ್ತಮಿತ್ರನ ಅಳಲು. ಆದರೆ ಈ ಆಸ್ಫೋಟ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಯಾವ ತಿರುವು ಪಡೆಯುತ್ತದೆ ಎಂಬುದೇ ಸದ್ಯದ ಕುತೂಹಲ.

Previous articleಟ್ರಂಪ್ ಟೀಂ ಮೊದಲ ಸಭೆ ಭಾರತದ ಜೊತೆಗೆ!
Next articleಸುಪ್ರೀಂನಲ್ಲಿ ದರ್ಶನ್ ವಿರುದ್ಧ ೧,೪೯೨ ಪುಟಗಳ ಮೇಲ್ಮನವಿ