ಮೊಬೈಲ್ ಗೀಳು ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ

0
17

ಸಿದ್ದಾಪುರ: ಇಡೀ ದಿನ ಮೊಬೈಲ್ ನೋಡುತ್ತಾ ಸಮಯ ಕಳೆಯುತ್ತಿದ್ದ ಬಾಲಕಿಗೆ ಬುದ್ಧಿವಾದ ಹೇಳಿದ್ದಕ್ಕೆ ಆಕೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಿದ್ರಕಾನ ಸಣ್ಮನೆಯಲ್ಲಿ ಸಂಭವಿಸಿದೆ.
ಸಣ್ಮನೆಯ ಪಲ್ಲವಿ ಶ್ರೀಧರ ಚನ್ನಯ್ಯ ಎಂಬ ೧೫ ವರ್ಷದ ಬಾಲಕಿಯು ಮೊಬೈಲ್ ಗೀಳು ಅಂಟಿಸಿಕೊಂಡಿದ್ದನ್ನು ಗಮನಿಸಿದ ಮನೆಯ ಜನ ಈ ರೀತಿ ಮಾಡುವುದು ಸರಿಯಲ್ಲವೆಂದು ತಿಳಿ ಹೇಳಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಬಾಲಕಿಯು ಮನೆಯ ಹತ್ತಿರದ ಸಾರ್ವಜನಿಕ ಬಾವಿಗೆ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜ. ೧೩ ರಂದೇ ಬಾಲಕಿಯು ನಾಪತ್ತೆಯಾಗಿದ್ದು ಅವಳನ್ನು ಯಾರೋ ಪುಸಲಾಯಿಸಿ ಯಾವುದೋ ಉದ್ದೇಶಕ್ಕೆ ಕರೆದುಕೊಂಡು ಹೋಗಿರಬೇಕೆಂದು ಮೃತ ಬಾಲಕಿಯ ತಂದೆ ಶ್ರೀಧರ ಚನ್ನಯ್ಯ ಸ್ಥಳಿಯ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೂ ಮಗಳಿಗಾಗಿ ಮನೆಯ ಜನರೆಲ್ಲ ಹುಡುಕಾಟ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಬಾಲಕಿಯ ಶವ ಸಾರ್ವಜನಿಕ ಬಾವಿಯಲ್ಲಿ ಕಂಡುಬಂದಿದ್ದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತಳ ತಂದೆ ಪುನಃ ದೂರು ಸಲ್ಲಿಸಿದ್ದಾರೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Previous articleಕನ್ನಡ ಹೋರಾಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ
Next articleಸಿಎಂ ಬಹಿರಂಗ ಚರ್ಚೆಗೆ ಬರಲಿ