ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಯೊಳಗೆ ಸಿಲುಕಿ ಸಾವು

0
21

ಕಾಪು : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಿಕೊಂಡು ಸಾವನ್ನಪಿದ ಘಟನೆ ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಕಾಪು ಪೊಲಿಪು‌ ನಿವಾಸಿ ಕಿಶೋರ್ (29) ಮೃತ ದುರ್ದೈವಿ. ಪ್ರತಿದಿನ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್ ಶುಕ್ರವಾರ ಮುಂಜಾನೆ ಕೂಡಾ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ.

ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಮತ್ತೊಂದು ಬೋಟಿನವರಿಗೆ ಮೃತದೇಹ ಪತ್ತೆಯಾಗಿದೆ. ನಂತರ ದಡಕ್ಕೆ ಕಯಾಕ್ ಹಾಗೂ ಮೃತದೇಹವನ್ನು ತಂದಿದ್ದಾರೆ. ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾ ಸದಸ್ಯ ಕಿರಣ್ ಆಳ್ವ, ವಿಜಯ್ ಕರ್ಕೇರ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಸ್ಥಳೀಯರಾದ ಶಿವಾಜಿ ಸುವರ್ಣ, ಬಾಲಕೃಷ್ಣ ಹಾಗೂ ಕಾಪು ಪೋಲಿಸರು ಭೇಟಿ ನೀಡಿದ್ದಾರೆ.

Previous articleಅವಳಿನಗರಕ್ಕೆ ಉಪರಾಷ್ಟ್ರಪತಿ ಆಗಮನ
Next articleರಾಜಕೀಯ ಭಾಷಣ ಮಾಡುವುದು ಮೋದಿ ಅವರಿಂದಲೇ ಕಲಿತಿದ್ದು