ಮದುವೆಗೆ ನಿರಾಕರಣೆ: ಯುವತಿಯ ಹತ್ಯೆಗೆ ಯತ್ನ

0
28

ಹೊಸಪೇಟೆ: ಮದುವೆಯಾಗಲು ಯುವತಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಜನನಿಬಿಡ ಸ್ಥಳದಲ್ಲಿಯೇ ಕಿರಾತಕನೊಬ್ಬ ಯುವತಿಗೆ ಚಾಕು ಇರಿದು ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನಗರಸಭೆ ಕಾರ್ಯಾಲಯ ಎದುರುಗಡೆ ಈ ಘಟನೆ ನಡೆದಿದ್ದು. ಯುವತಿ ಕೆಲಸಕ್ಕೆ ತೆರಳುತ್ತಿದ್ದಾಗ ಆಂಧ್ರ ಪ್ರದೇಶದ ನಂದ್ಯಾಲ ಗ್ರಾಮದಿಂದ ಹೊಸಪೇಟೆ ನಗರಕ್ಕೆ ಆಗಮಿಸಿ ಯುವತಿಯ ಕೊಲೆಗೆ ಯತ್ನ ಮಾಡಿದ ಕಿರಾತಕ ವ್ಯಕ್ತಿ ವಿಜಯಭಾಸ್ಕರ್(26) ಎನ್ನಲಾಗಿದೆ, ಇನ್ನು ಚಾಕು ಇರತಕ್ಕೆ ಒಳಗಾದ ಗಂಭೀರವಾಗಿ ಯುವತಿ ಗಾಯಗೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಹಲ್ಲೆ ಪ್ರಕರಣ: ಸಿಸಿಟಿವಿ ವಿಡಿಯೋಗಳು ಬಹಿರಂಗ: ವಿಂಗ್ ಕಮಾಂಡರ್ ವಿರುದ್ಧವೇ FIR ದಾಖಲು
Next articleಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ವಿಪ್ರರ ಪ್ರತಿಭಟನೆ