ಬಸ್ ನಿಲ್ದಾಣದಲ್ಲೇ ನೇಣಿಗೆ ಶರಣು

0
18

ಬೆಳಗಾವಿ: ಸಾರಿಗೆ ನಿಯಂತ್ರಕ ಬಸ್ ನಿಲ್ದಾಣದಲ್ಲಿ ನೇಣಿಗೆ ಶರಣಾದ ಘಟನೆ ‌ರಾಯಬಾಗ ಬಸ್ ನಿಲ್ದಾಣದಲ್ಲಿ ನಡೆದಿದೆ.ಭಜಂತ್ರಿ ಎನ್ನುವ ನಿಯಂತ್ರಕ ನೇಣಿಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ.ಮಂಗಳವಾರ ಮಧ್ಯಾಹ್ನದಿಂದ ಕಾರ್ಯ ನಿರ್ವಹಿಸಿದ ಭಜಂತ್ರಿ ನಿನ್ನೆ ರಾತ್ರಿ ಬಸ್ ನಿಲ್ದಾಣದಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತ ಭಜಂತ್ರಿ ಮೂಲತಃ ಗೋಕಾಕ ತಾಲೂಕಿನ ಶಿಣದೋಳಿ ಗ್ರಾಮದವರು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Previous articleನೂತನ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರನ್ ನೇಮಕ
Next articleಯಾದಗಿರಿ ರೀಲ್ಸ್‌ ಪ್ರಕರಣ: ಇಬ್ಬರ ಬಂಧನ