ಫೆಬ್ರವರಿ 10 ಮತ್ತು 11 ರಂದು ಕಬಡ್ಡಿ ಪಂದ್ಯಾವಳಿ

0
12

ಧಾರವಾಡ: ಫೆಬ್ರವರಿ 10 ಮತ್ತು 11 ರಂದು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ದೇಸಿ ಕ್ರೀಡೆ ಕಬಡ್ಡಿಯನ್ನು ಬೆಳೆಸುತ್ತಿರುವ ನಮ್ಮ ಕ್ಷೇತ್ರದ ದೇಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಇದೇ ಫೆಬ್ರವರಿ 10 ಮತ್ತು 11 ರಂದು ಧಾರವಾಡ ಸಂಸದ ಕ್ರೀಡಾ ಮಹೋತ್ಸವದ ಅಂಗವಾಗಿ ಧಾರವಾಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಎಲ್ಲರೂ ಬಂದು ನಮ್ಮ ಕ್ಷೇತ್ರದ ಪ್ರತಿಭೆಗಳಿಗೆ ಉತ್ತೇಜನ ನೀಡಿ ಎಂದು ಕೋರುತ್ತೇನೆ ಎಂದಿದ್ದಾರೆ.

ಸ್ಥಳ: ಹರಭಟ್ ಕಾಲೇಜು ಮೈದಾನ, ಕುಂದಗೋಳ

Previous articleಬಾಗಲಕೋಟೆಯಲ್ಲಿ ನಾಳೆ ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ
Next articleಇಂದಿನಿಂದ ಪ್ರತಿ ಮನೆಯಲ್ಲಿ ಕಾಟೇರ