ಪ್ರವಾಹಕ್ಕೆ ಸಿಲುಕಿದ್ದ ವ್ಯಕ್ತಿ ರಕ್ಷಣೆ

0
19

ಬಾಗಲಕೋಟೆ: ಜಿಲ್ಲೆಯ ಮಂಟೂರನಲ್ಲಿ ನೆರೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯರ ಸಹಾಯದೊಂದಿಗೆ ಪೊಲೀಸರು ರಕ್ಷಿಸಿದ್ದಾರೆ.
ಮಳಲಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಹಾಜಿಸಾಬ ಹಸನಸಾಬ ನದಾಫ್(೪೦) ರಕ್ಷಣೆಗೊಳಗಾದ ವ್ಯಕ್ತಿ. ಈತ ಟ್ರ್ಯಾಕ್ಟರ್‌ನಲ್ಲಿ ಸಾಗುತ್ತಿದ್ದಾಗ ವಾಹನ ಬಂದ್ ಆದ ಕಾರಣ ಟ್ರ್ಯಾಕ್ಟರ್ ಮೇಲೆ ಹತ್ತಿ ನಿಂತಿದ್ದ. ಸುತ್ತಲೂ ನೀರು ಆವರಿಸಿದ ಕಾರಣ ಆತ ಕೊಚ್ಚಿಹೋಗುವ ಅಪಾಯವಿತ್ತು. ಪೊಲೀಸರು ಹಾಗೂ ಗ್ರಾಮಸ್ಥರು ನದಿಯಲ್ಲಿ ತೆರಳಿ ಆತನನ್ನು ರಕ್ಷಿಸಿದ್ದಾರೆ.

Previous articleಕಾಳಜಿ ಕೇಂದ್ರ ಬೇಡ ಶಾಶ್ವತ ಪರಿಹಾರ ಕೊಡಿ: ಪ್ರವಾಹ ಸಂತ್ರಸ್ತರ ಆಕ್ರೋಶ
Next articleತುಂಬಿ ಹರಿದ ಹುಲಿಕೇರಿ ಕೆರೆ