ಪೊಲೀಸ್ ಶ್ವಾನ ತುಂಗಾ ನಿಧನ

0
28

ದಾವಣಗೆರೆ: ಅನಾರೋಗ್ಯದಿಂದ ಬಳಲುತ್ತಿ ಪೊಲೀಸ್ ಶ್ವಾನ ತುಂಗಾ(೧೩) ಶುಕ್ರವಾರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದೆ.
ಆಗಸ್ಟ್ 15ರ ಸ್ವಾತಂತ್ರ‍್ಯ ಅಮೃತ ಮಹೋತ್ಸವ ದಿನಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್ ಶ್ವಾನಗಳ ಪ್ರದರ್ಶನ ದಲ್ಲಿ ತುಂಗಾ ಅದ್ಭುತ ಪ್ರದರ್ಶನ ನೀಡಿತ್ತು. ಇದರ ಕಾರ್ಯ ನೋಡಿ ಜನ ಮೆಚ್ಚುಗೆ ಪಡೆದಿತ್ತು. ತುಂಗಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. 70 ಕೊಲೆ ಪ್ರಕರಣ ಪತ್ತೆ ಹಚ್ಚಿತ್ತು. ಇಬ್ಬರಿಗೆ ಗಲ್ಲು ಹಾಗೂ ನಾಲ್ವರಿಗೆ ಜೀವಾವಧಿ ಶಿಕ್ಷೆ ಕೊಡಿಸಿತ್ತು. 35ಕ್ಕೂ ಹೆಚ್ಚು ಕಳ್ಳತನ, ದರೋಡೆ ಪ್ರಕರಣಗಳನ್ನು ಭೇದಿಸಿದೆ. ಪೊಲೀಸರು ಭೇದಿಸಲು ಸಾಧ್ಯವಾಗದ ಪ್ರಕರಣಗಳನ್ನೂ ಕೂಡ ತುಂಗಾ ಪತ್ತೆ ಮಾಡಿತ್ತು.
ಸೂಳೆಕೆರೆ ಗುಡ್ಡದಲ್ಲಿ ನಡೆದ ಕೊಲೆ ಪ್ರಕರಣದ ತನಿಖೆ ವೇಳೆ ರಾತ್ರಿಯ ಸಮಯದಲ್ಲಿ 11 ಕಿ.ಮೀ. ಓಡಿ ಕೊಲೆಗಾರನ ಸುಳಿವು ಪತ್ತೆ ಮಾಡಿತ್ತು.

Previous articleಬೈಕ್ ಸವಾರನ ರುಂಡ ಕಡಿದು ಕೊಲೆ
Next articleಪಾಕ್‌ನಲ್ಲಿ ಪ್ರವಾಹ 1000 ಜನ ಬಲಿ, ತುರ್ತುಸ್ಥಿತಿ ಘೋಷಣೆ