ಪೊಲೀಸರು-ಯುವಕರೊಂದಿಗೆ ಮಾತಿನ ಚಕಮಕಿ

0
10

ಮಾನ್ವಿ: ಕೇಸರಿ ಶಾಲು ವಿಷಯವಾಗಿ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಾಹ್ಮಣ ವಾಡಿ ಬೂತ್ ಸಂಖ್ಯೆ 185ರಲ್ಲಿ ನಡೆದಿದೆ.
ಕೇಸರಿ ಶಾಲು ಧರಿಸಿ ಮತದಾನ ಮಾಡಲು ಬಂದಿದ್ದ ಯುವಕರಿಗೆ ಶಾಲು ಧರಿಸಿ ಹೋಗಲು ನಿರಾಕರಿಸಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆರ್‌ಓ ಮತಗಟ್ಟೆ ಚುನಾವಣೆ ಅಧಿಕಾರಿ, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕೇಸರಿ ಶಾಲು ಧರಿಸಿ ಮತದಾನ ನಡೆಸಬಹುದು ಆದರೆ ಯಾವುದೇ ಚಿಹ್ನೆ ಕಂಡುಬಂದಲ್ಲಿ ಮತ ಚಲಾವಣೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿ ಸಮಸ್ಯೆ ಬಗೆಹರಿಸಿದ್ದಾರೆ.

Previous articleಧಾರವಾಡ ಲೋಕಸಭೆ ಕ್ಷೇತ್ರ ಮತದಾನ ಪ್ರಮಾಣ 5 ಗಂಟೆಗೆ
Next articleಖೊಟ್ಟಿ ಮತದಾನಕ್ಕೆ ಮುಂದಾದ ಯುವಕ ಪೊಲೀಸ್ ವಶಕ್ಕೆ