ನಮ್ಮ ಸರಕಾರವನ್ನು ಅಲುಗಾಡಿಸಲು ಆಗಲ್ಲ

0
24

ಬಳ್ಳಾರಿ: ಕಾಂಗ್ರೆಸ್‌ನ ೧೩೮, ಹರಪನಳ್ಳಿ, ಪಾಂಡವಪುರದ ಇಬ್ಬರು ಶಾಸಕರು ಸೇರಿ ಒಟ್ಟು ೧೪೦ ಸ್ಥಾನಗಳು ಇವೆ. ಬಿಜೆಪಿಯ ಕೆಲ ಶಾಸಕರ ಬೆಂಬಲವೂ ಇದೆ. ಇಷ್ಟು ಶಕ್ತಿ ಇರುವ ನಮ್ಮ ಸರಕಾರವನ್ನು ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಂಡೂರಿನಲ್ಲಿ ಮತದಾರರಿಗೆ ಅಭಿನಂದನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು, ಜೆಡಿಎಸ್‌ನ ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ನಮ್ಮ ಸರಕಾರವನ್ನು ಕಿತ್ತು ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಇಷ್ಟೊಂದು ಬಲಶಾಲಿಯಾಗಿರುವ ಸರಕಾರವನ್ನು ಅಸ್ಥಿರಗೊಳಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಅಧಿಕಾರ ನಶ್ವರ, ಕಾಂಗ್ರೆಸ್ ಸರ್ಕಾರದ ಸಾಧನೆಗಳು ಅಜಾರಾಮರ, ಕೊನೆಗೆ ಮತದಾರರೇ ಈಶ್ವರ ಅಂತಾ ನಿಮಗೆ ಕೈ ಮುಗಿಯಲು ನಾವು ಇಲ್ಲಿಗೆ ಬಂದಿದ್ದೇವೆ. ಗಾಂಧೀಜಿ ಅವರು ಸಂಡೂರನ್ನ ಕರ್ನಾಟಕದ ಕಾಶ್ಮೀರ ಅಂತಾ ಕರೆದಿದ್ದರು ಬಳ್ಳಾರಿ ವಿಜಯನಗರ ಜಿಲ್ಲೆಗಳು ಕಾಂಗ್ರೆಸ್ ಭದ್ರಕೋಟೆ. ಈ ಹಿಂದೆ ಸೋನಿಯಾಗಾಂಧಿ ಅವರನ್ನ ಈ ಕ್ಷೇತ್ರದಿಂದ ಗೆಲ್ಲಿಸಿ ಕಳುಹಿಸಿದ ಇತಿಹಾಸವಿದೆ. ಸತತವಾಗಿ ೧೩ ಬಾರಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಾಗಿದೆ. ಸಂಡೂರಷ್ಟೇ ಅಲ್ಲ; ಬೊಮ್ಮಾಯಿ, ಕುಮಾರಸ್ವಾಮಿ ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ದೇವೆಗೌಡರು ಅಲ್ಲಿಯೇ ಕುಳುತುಕೊಂಡ್ರು ಆದರೂ ನಾವು ಗೆದ್ದು ಬಂದಿದ್ದೇವೆ. ಜನರು ಗ್ಯಾರೆಂಟಿ ಯೋಜನೆಗಳು ಮೂಲಕ ಆರ್ಶಿವಾದ ಮಾಡಿದರು. ಅವರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಸಂಡೂರಿಗೆ ಯಾವುದೇ ಕೆಲಸಲ್ಲೂ ಸರಕಾರ ಬೆಂಬಲ ನೀಡುತ್ತದೆ ಎಂದು ಹೇಳಿದರು.

Previous articleಶಂಕರಾಚಾರ್ಯರ ಅವಹೇಳನ: ಬ್ರಾಹ್ಮಣ ಮಹಾಸಭೆ ಖಂಡನೆ
Next articleಜಿಡಿಪಿ ಪ್ರಗತಿಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಮೊದಲ ಸ್ಥಾನ