ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್‌ ಸಿಂಗ್‌

0
10
ರಾಜನಾಥ್ ಸಿಂಗ್

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ಕಳೆದ ವಾರ ಸಂಭವಿಸಿರುವ ಭಾರತ – ಚೀನಾ ಯೋಧರ ಗಡಿ ಘರ್ಷಣೆಯಲ್ಲಿ ಯಾವುದೇ ಸೈನಿಕರು ಮೃತಪಟ್ಟಿಲ್ಲ ಮತ್ತು ಗಂಭೀರವಾಗಿ ಗಾಯಗೊಂಡಿಲ್ಲ. ಚೀನಾದ ಅತಿಕ್ರಮಣ ಪ್ರಯತ್ನವನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.
ಸಂಘರ್ಷದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಯಾರಿಗೂ ತೀವ್ರ ಗಾಯಗಳೂ ಆಗಿಲ್ಲ. ಚೀನಾ ಸೈನಿಕರು ವಾಪಸ್ ತಮ್ಮ ನೆಲೆಗೆ ತೆರಳಿದ್ದಾರೆ. ಶಾಂತಿ ಕಾಪಾಡಲು ಚೀನಾ ಸೇನಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ. ಭಾರತ ಎಲ್ಲ ದಾಳಿಗಳನ್ನು ತಡೆಯುವ ಶಕ್ತಿ ಹೊಂದಿದೆ. ಭಾರತ ಶೌರ್ಯ ಕ್ಷಮತೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಲೋಕಸಭೆಯಲ್ಲಿ ರಾಜನಾಥ್‌ ಸಿಂಗ್‌ ಉತ್ತರಿಸಿದ್ದಾರೆ.

Previous articleಬಾಲ್ಯದ ನೆನಪಿಗೆ ಶರಣೆಂದ ಶರಣ
Next articleನಾಳೆಯಿಂದ ‘ನಮ್ಮ ಕ್ಲಿನಿಕ್’ ಆರಂಭ