ನನ್ನ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಬೇಡಿ: ರಾಮುಲು

0
44
ಬಿ.ಶ್ರೀರಾಮುಲು

ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‌ನಲ್ಲಿ ಇರುಸು-ಮುರುಸು ಉಂಟಾಗಿದೆ. ಹೀಗಾಗಿ ಪಕ್ಷಕ್ಕೆ ಆಹ್ವಾನಿಸಿ ಹಿಂದುಳಿದ ವರ್ಗದವರನ್ನು ಒಂದು ಮಾಡಲೆಂದು ನಾನು ಮಾತನಾಡಿದ್ದೇನೆ ಅದಕ್ಕೆ ಯಾವುದೇ ಅರ್ಥ ಕಲ್ಪಿಸಬೇಡಿ ಎಂದು ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪರವಾಗಿ ತಾವು ನೀಡಿದ್ದ ಹೇಳಿಕೆ ಕುರಿತು ಬೇರೆ ಅರ್ಥ ಕಲ್ಪಿಸಬೇಡಿ. ನಾನು ಅವರನ್ನು ಬಿಜೆಪಿಗೆ ಆಹ್ವಾನಿಸುವ ಬಗ್ಗೆ ಮಾತನಾಡಿದ್ದೇನೆ. ಈ ಕುರಿತಂತೆ ರಾಜ್ಯಾಧ್ಯಕ್ಷರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದರು.

ಬಿ.ಶ್ರೀರಾಮುಲು
Previous article22ರೊಳಗಾಗಿ ಮೀಸಲಾತಿ ಘೋಷಿಸದಿದ್ದರೆ ಧರಣಿ
Next articleಮುಧೋಳ ನಾಯಿ ತಳಿ ಈಗ ದೆಹಲಿಗೆ