ದೇಶದ್ರೋಹಿಗಳಿಗೆ ಕೊಟ್ಟ ಪ್ರೋತ್ಸಾಹವೇ ಘೋಷಣೆ ಕೂಗೋಕೆ ಧೈರ್ಯ

0
16

ಹುಬ್ಬಳ್ಳಿ: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಓಲೈಕೆ ರಾಜಕಾರಣದ ಅಧಪತನ. ದೇಶದ್ರೋಹಿಗಳಿಗೆ ಪ್ರೋತ್ಸಾಹ ದೊರೆತಿರುವುದರಿಂದ ಘೋಷಣೆ ಕೂಗುವಷ್ಟು ಧೈರ್ಯ ಬಂದಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡಿರುವುದೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಧಿಕಾರ ಅವಧಿಯಲ್ಲಿ ಈ ರೀತಿಯ ಕಾರ್ಯಗಳಿಗೆ ಆಸ್ಪದ ನೀಡದೇ ಮಟ್ಟ ಹಾಕಿ, ಕಠಿಣ ಕ್ರಮ ಕೈಗೊಂಡಿದ್ದೇವು. ಅಂದು ರಾಜ್ಯ ಬಿಟ್ಟು ಬಿಲ ಸೇರಿದವರೆಲ್ಲ ಇಂದು ಹೊರ ಬಂದು ಘೋಷಣೆ ಕೂಗುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನವರು ಮತಕ್ಕಾಗಿ ದೇಶದ ಹಿತವನ್ನು ಅಡವಿಡುತ್ತಿದ್ದಾರೆ. ಒಂದೆಡೆ ದೇಶ ವಿಭಜನೆ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್‌ನಿAದ ದೇಶ ರಕ್ಷಣೆ ಮಾಡಲು ಸಾಧ್ಯವಿಲ್ಲ. ನಿಷೇಧಿತ ಪಿಎಫ್‌ಐ ಸಂಘಟನೆ ಬೇರೆ ಬೇರೆ ರೀತಿ ಕೆಲಸ ಮಾಡುತ್ತಿದೆ. ಇದರಿಂದ ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಮುಖ್ಯಮಂತ್ರಿ ಓರ್ವ ಮುಸುಕುಧಾರಿಯಾಗಿದ್ದಾರೆ ಎಂದು ಹೇಳಿದರು.
ಇನ್ನು ಒಂದು ವಾರದಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Previous articleಬಿಜೆಪಿ ಕಾರ್ಯಕರ್ತರ ಬಂಧನ
Next articleಮಂಗನ ಕಾಯಿಲೆಗೆ ಮಹಿಳೆ ಸಾವು