ದೇವೇಗೌಡರ ಮೇಲೆ ಗೌರವ ಇದ್ದರೆ ಬಂದು ಶರಣಾಗು

0
14

ಬೆಂಗಳೂರು: ನನ್ನ ಮತ್ತು ದೇವೇಗೌಡರ ಮೇಲೆ ಗೌರವ ಇದ್ದರೆ 48 ಗಂಟೆಯೊಳಗೆ ಬಂದು ತನಿಖೆ ಎದುರಿಸು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ಸಂಸದ ಪ್ರಜ್ವಲ್‌ ರೇವಣ್ಣಗೆ ಮನವಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟು ದಿನ ಈ ಕಳ್ಳ-ಪೊಲೀಸ್ ಆಟ. ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸು. ಮುಂದಿನ 24, 48 ಗಂಟೆ ಒಳಗೋ ಬಂದು ತನಿಖೆ ಎದುರಿಸು ಎಂದು ಮನವಿ ಮಾಡಿದರು.
ಯಾಕೆ ಹೆದರಬೇಕು. ಈ ನೆಲ ಕಾನೂನು ಇದೆ. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಕಾರ್ಯಕರ್ತರ ಮೇಲೆ ಪಕ್ಷ ಬೆಳೆದಿದೆ. ಅವರ ಆಶೀರ್ವಾದದಿಂದ ಬೆಳೆದಿದ್ದೇವೆ. ಹೀಗಾಗಿ ವಿದೇಶದಿಂದ ವಾಪಸ್ ಬಂದು ತನಿಖೆಗೆ ಸಹಕರಿಸು ಎಂದರು.

Previous articleಅಂಜಲಿ ನಿವಾಸಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ‌‌‌
Next articleಗೃಹ ಸಚಿವರಿಂದ ಪರಿಹಾರದ ಭರವಸೆ