ದೇವಪ್ಪಜ್ಜ ಹತ್ಯೆ ಪ್ರಕರಣ: ಅನುಮಾನಾಸ್ಪದ ವ್ಯಕ್ತಿ ಚಿತ್ರ ಬಿಡುಗಡೆ

0
14

ಹುಬ್ಬಳ್ಳಿ : ವೈಷ್ಣೋದೇವಿ ಮಂದಿರದ ಆವರಣದಲ್ಲಿ ರವಿವಾರ ಸಂಜೆ ನಡೆದ ಮಂದಿರದ ಸಂಸ್ಥಾಪಕ ದೇವಪ್ಪಜ್ಜ ವನಹಳ್ಳಿ ಅವರ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಪತ್ತೆಗೆ ೮ ತಂಡಗಳಲ್ಲಿ ಜಾಲ ಬೀಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರೇಟ್ ಪೊಲೀಸ್ ತಂಡಗಳು ತೀವ್ರ ಕಾರ್ಯಾಚರಣೆ ನಡೆಸಿವೆ.

ಕೃತ್ಯವನ್ನು ಒಬ್ಬನೇ ವ್ಯಕ್ತಿ ಎಸಗಿದ್ದು, ಅನುಮಾನಾಸಪದ ವ್ಯಕ್ತಿಯ ಸುಳಿವು ಪತ್ತೆ ಮಾಡಿದ್ದು, ಸಿಸಿ ಟಿವಿ ಕ್ಯಾಮೆರಾದಲ್ಲಿ ಆತನ ಚಲನವಲನದ ಫುಟೇಜ್ ಸಂಗ್ರಹಿಸಿದೆ. ಇದರ ಆಧಾರದ ಕೆಲ ಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಭಾವಚಿತ್ರದಲ್ಲಿರುವ ವ್ಯಕ್ತಿಯ ಗುರುತು ಇದ್ದರೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರು ಕೋರಿದ್ದಾರೆ. ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದೂ ಆಯುಕ್ತರು ತಿಳಿಸಿದ್ದಾರೆ.

ವ್ಯಕ್ತಿ ಬಗ್ಗೆ ತಿಳಿದ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ( ಕಾನೂನು ಮತ್ತು ಸುವ್ಯವಸ್ಥೆ ) -೯೪೮೦೮೦೨೦೦೫, ಡಿಸಿಪಿ ( ಅಪರಾಧ ಮತ್ತು ಸಂಚಾರ ವಿಭಾಗ)-೯೪೮೦೮೦೨೦೦೩, ಎಸಿಪಿ (ಉತ್ತರ) – ೯೪೮೦೮೦೨೦೧೨ , ಎಸಿಪಿ (ಸಿಸಿಬಿ)- ೯೪೮೦೮೦೨೦೨೯, ಪಿಐ ( ಎಪಿಎಂಸಿ ಪೊಲೀಸ್ ಠಾಣೆ) – ೯೪೮೦೮೦೨೦೩೯ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

Previous articleಮರ ಬಿದ್ದು ಇಬ್ಬರ ಸಾವು
Next articleಐಟಿ ಸಿಬ್ಬಂದಿಯ ಸಂಕಟ