ಚುನಾವಣೆ ಕಣದಲ್ಲಿ ಇರೋದು ಖಚಿತ

0
13

ಬಾಗಲಕೋಟೆ: ನನಗೆ ಟಿಕೆಟ್‌ ನೀಡಿಲ್ಲ, ನಾನು ಅಭ್ಯರ್ಥಿ ಅಲ್ಲ ಎಂದು ನಾನು ಕ್ಷೇತ್ರದಲ್ಲಿ ಓಡಾಡುವುದನ್ನು ನಿಲ್ಲಿಸಿಲ್ಲ. ನೀವು ಪಕ್ಷೇತರ ನಿಂತರೂ ನಾವು ನಿಮಗಾಗಿ ಕೆಲಸ ಮಾಡುತ್ತೇವೆ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ ಎಂದು ವೀಣಾ ಕಾಶಪ್ಪನವರ್ ಹೇಳಿದ್ದಾರೆ.
ಬೆಂಬಲಿಗರ ಸಭೆಯ ನಂತರ ಮಾತನಾಡಿರುವ ಅವರು ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ. ನ್ಯಾಯ ಸಿಗುವ ಭರವಸೆ ಇದೆ. ಒಂದು ವೇಳೆ ಅಲ್ಲಿ ನಮಗೆ ವ್ಯತಿರಿಕ್ತವಾದ ನಿರ್ಣಯ ಹೊರಬಂದರೆ, ಚುನಾವಣೆ ಕಣದಲ್ಲಿ ಇರೋದು ಖಚಿತ, ನಿಮ್ಮ ಕಣ್ಣಿನ ಒಂದು ಹನಿಯೂ ಭೂಮಿಗೆ ಬೀಳಬಾರದು ಎಂದಿದ್ದಾರೆ. ನಮಗೆ ಬಹಳ ನೋವಾಗಿದೆ. ನೀವು ಪಕ್ಷೇತರ ನಿಂತರೂ ನಾವು ನಿಮಗಾಗಿ ಕೆಲಸ ಮಾಡುತ್ತೇವೆ. ನಿಮ್ಮ ನಿರ್ಧಾರಕ್ಕೆ ನಾವು ಬದ್ಧ ಎಂದು ಪ್ರತಿಯೊಬ್ಬರು ಹೇಳಿದ್ದಾರೆ, ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಪಕ್ಷಾತೀತವಾಗಿ ಹೇಳಿದ್ದಾರೆ, ಪಕ್ಷದಲ್ಲಿದ್ದವರು ಹೇಳಿದ್ದಾರೆ. ಇನ್ನು ಪಕ್ಷೇತರರ ಪರ ಕೆಲಸ ಮಾಡದಂತೆ ಕಾರ್ಯಕರ್ತರಿಗೆ ನೋಟಿಸ್‌ ಏನೋ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಶಾಸಕರನ್ನು ಹೊರಗಿಟ್ಟು ತಾನು ಸ್ಫರ್ಧಿಸುವುದು ಗೊತ್ತಿದೆ ಎಂದಿದ್ದಾರೆ.

Previous articleಬಿಜೆಪಿ ಸೇರಿದ ಜನಾರ್ದನ ರೆಡ್ಡಿ
Next articleಮಾರ್ಚ್ 28ರಂದು ಹುಬ್ಬಳ್ಳಿ ಜಗ್ಗಲಗಿ ಹಬ್ಬ