ಚಾಕಲೇಟ್ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ

0
24
ಅತ್ಯಾಚಾರ

ಹುಬ್ಬಳ್ಳಿ: ಆಟವಾಡುತ್ತಿದ್ದ ಐದು ವರ್ಷದ ಬಾಲಕಿಗೆ ಚಾಕಲೇಟ್ ಕೊಟ್ಟು ಅಂಗನವಾಡಿ ಕಟ್ಟಡದ ಮೇಲೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ನಗರದ ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಬಾಲಕನೋರ್ವ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಎಂದು ಬಾಲಕಿ ಪೋಷಕರು ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಮನೆ ಮುಂದೆ ಬಾಲಕಿ ಆಟವಾಡುತ್ತಿದ್ದಾಗ ಆಕೆಗೆ ಆರೋಪಿ ಚಾಕಲೇಟ್ ಆಸೆ ತೋರಿಸಿದ್ದಾನೆ. ಬಳಿಕ ಆಕೆಗೆ ಚಾಕಲೇಟ್ ಕೊಟ್ಟು ತಮ್ಮ ಓಣಿಯಲ್ಲಿರುವ ಅಂಗನವಾಡಿ ಕಟ್ಟಡದ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಅತ್ಯಾಚಾರ
Previous articleಕೆಚ್ಚೆದೆಯ ಹೋರಾಟಗಾರರು ಕಿಶನರಾವ್-ಮುರಡಿ ಭೀಮಜ್ಜ
Next articleಖಾದಿ ರಾಷ್ಟ್ರಧ್ವಜ ದಾಖಲೆ ಮಾರಾಟ, ೩.೫ ಕೋಟಿ ರೂ. ವಹಿವಾಟು..!